ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀಮಧ್ವ ಶಂಕರರ ಹೆಸರಿಡಿ: ಪುತ್ತಿಗೆ ಮಠದ ಶ್ರೀಗಳ ಆಗ್ರಹ

ಅಯೋಧ್ಯೆಯ ವಿಮಾನ ನಿಲ್ದಾಣನಕ್ಕೆ ಶ್ರೀರಾಮನ ಹೆಸರಿಡಲಾಗಿದೆ. ಹಾಗಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಮಧ್ವ ಶಂಕರ ಹೆಸರಿಟ್ಟರೆ ದಾರ್ಶನಿಕ ಪರಂಪರೆಗೆ ಗೌರವ ಸಂದಂತೆ.

  • pruthvi Shankar
  • Published On - 19:16 PM, 26 Nov 2020
ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಗಳು

ಉಡುಪಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀ ಮಧ್ವ ಶಂಕರರ ಹೆಸರಿಡುವಂತೆ ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಗಳು ಒತ್ತಾಯ ಮಾಡಿದ್ದಾರೆ.

ಮಂಗಳೂರು ಸಮೀಪದಲ್ಲಿ ಉಡುಪಿ ಹಾಗೂ ಶೃಂಗೇರಿ ಕ್ಷೇತ್ರ ಇದೆ. ಜಗದ್ಗುರು ಶಂಕರಾಚಾರ್ಯರು ಶೃಂಗೇರಿ ಮಠ ಸ್ಥಾಪಿಸಿದ್ದಾರೆ. ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀ ಕೃಷ್ಣ ಮಠ ಸ್ಥಾಪಿಸಿದ್ದಾರೆ. ಹೀಗಾಗಿ ವಿಮಾನ ನಿಲ್ದಾಣಕ್ಕೆ ಶ್ರೀಮಧ್ವ ಶಂಕರ ವಿಮಾನ ನಿಲ್ದಾಣ ಹೆಸರಿಡುವುದು ಅರ್ಥಪೂರ್ಣ ಎಂದು ಶ್ರೀಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಅಯೋಧ್ಯೆಯ ವಿಮಾನ ನಿಲ್ದಾಣನಕ್ಕೆ ಶ್ರೀರಾಮನ ಹೆಸರಿಡಲಾಗಿದೆ. ಹಾಗಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಮಧ್ವ ಶಂಕರರ ಹೆಸರಿಟ್ಟರೆ ದಾರ್ಶನಿಕ ಪರಂಪರೆಗೆ ಗೌರವ ಸಂದಂತೆ. ಅಲ್ಲದೆ ಆಧ್ಯಾತ್ಮಿಕತೆಯೇ ಭಾರತದ ಮೂಲ ಸಂಪತ್ತು, ರಾಮಾನುಜಾಚಾರ್ಯ, ಬಸವಣ್ಣನವರ ಹೆಸರುಗಳನ್ನು ಅವರ ಮೂಲ ಊರಗಳ ಸಮೀಪದ ವಿಮಾನ ನಿಲ್ದಾಣಕ್ಕೆ ಹೆಸರಿಡಬೇಕು ಎಂದು ಪುತ್ತಿಗೆ ಮಠದ ಸುಗುಣೇಂದ್ರ ಸ್ವಾಮೀಜಿ ಸಲಹೆ ನೀಡಿದ್ದಾರೆ.