KSRTC ಬಸ್​ನಲ್ಲಿ ಬಂದ ಹೆಬ್ಬಾವು ಮರಿ! ಮೆಜೆಸ್ಟಿಕ್​ನಲ್ಲಿ ಏನು ಮಾಡಿತು?

ಬೆಂಗಳೂರು: ಲಾಕ್​ಡೌನ್​ನಿಂದಾಗಿ ಕಳೆದ ಎರಡು ತಿಂಗಳಿನಿಂದ ಮಂಗಳೂರಿನಿಂದ ಸಂಚರಿಸದಿದ್ದ KSRTC ಬಸ್ ನಿನ್ನೆ ರಾತ್ರಿ 10:30ರ ಸುಮಾರಿಗೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಪ್ರಯಾಣಿಕರ ಸಮೇತ ಬಂದಿತ್ತು. ಪ್ರಯಾಣಿಕರನ್ನು ಕೆಳಗಿಳಿಸಿ ಬಸ್​ನ ಸ್ಯಾನಿಟೈಸ್ ಮಾಡುವ ವೇಳೆ ಬಸ್ಸಿನ ಮೀಟರ್ ಬೋರ್ಡ್ ಬಳಿ ಹೆಬ್ಬಾವಿನ ಮರಿ ಕಾಣಿಸಿಕೊಂಡಿದೆ.

ಒಂದೂವರೆ ಅಡಿ ಉದ್ದರ ಅಂದಾಜು‌ ಐದು ತಿಂಗಳಿನ ಹೆಬ್ಬಾವು ಎನ್ನಲಾಗಿದೆ. ಗಾಬರಿಗೊಂಡ KSRTC ಸಿಬ್ಬಂದಿ ಬಿಬಿಎಂಪಿ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಕರೆಮಾಡಿ ಗಮನಕ್ಕೆ ತಂದಿದ್ದಾರೆ. ಕೂಡಲೇ ಬಿಬಿಎಂಪಿ ಅರಣ್ಯ ಸಂರಕ್ಷಾ ಘಟಕದ ಸಿಬ್ಬಂದಿ ರಾಜೇಶ್ ಬಸ್ ನಿಲ್ದಾಣಕ್ಕೆ ಆಗಮಿಸಿ ಹೆಬ್ಬಾವಿನ ಮರಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.

ಲಾಕ್​ಡೌನ್​ನಿಂದಾಗಿ ಕಳೆದ ಎರಡು ತಿಂಗಳಿನಿಂದ ಮಂಗಳೂರು ಬಸ್ ನಿಲ್ದಾಣದಲ್ಲಿ‌ ನಿಂತಿದ್ದ ಬಸ್ ಇಂದು‌ ಬೆಂಗಳೂರಿಗೆ ಮೊದಲ ಟ್ರಿಪ್ ಬಂದಿದೆ. ಮಂಗಳೂರಿನಲ್ಲಿ‌ ಬಸ್ ನಿಲ್ಲಿಸಿದ್ದಾಗ ಇಂಜಿನ್ ಬಳಿ ಹೆಬ್ಬಾವಿನ ಮರಿ ಆಶ್ರಯ ಪಡೆದಿರಬಹುದು ಎನ್ನಲಾಕ್ತಿದೆ. ಸ್ಯಾನಿಟೈಸರ್ ಮಾಡಲು ರಾಸಯನಿಕ ಸಿಂಪಡನೆ ವೇಳೆ ಹೆಬ್ಬಾವಿನ ಮರಿ ಹೊರಬಂದಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more