ನೀರಿನ ವಿಚಾರಕ್ಕೆ ಕ್ವಾರಂಟೈನ್ ವಲಸೆ ಕಾರ್ಮಿಕರ ನಡುವೆ ಮಾರಾಮಾರಿ

ಯಾದಗಿರಿ: ಬೋರ್‌ವೆಲ್‌ನಲ್ಲಿ ನೀರಿಗಾಗಿ ಕ್ವಾರಂಟೈನ್ ಕೇಂದ್ರದಲ್ಲಿ ವಲಸೆ ಕಾರ್ಮಿಕರು ಕಲ್ಲು ಎಸೆದು ಹೊಡೆದಾಡಿಕೊಂಡಿರುವ ಘಟನೆ ಯಾದಗಿರಿಯ ಡಿಡಿಯು ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದಿಂದ ವಾಪಸಾಗಿದ್ದ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್ ಕೇಂದ್ರದ ಮುಂಭಾಗದಲ್ಲಿರುವ ಬೋರವೆಲ್​ನಲ್ಲಿ ನೀರು ಹಿಡಿಯುವ ವಿಚಾರಕ್ಕೆ ಮಹಿಳೆಯರ ನಡುವೆ ಜಗಳ ಶುರುವಾಗಿದೆ. ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ.

ಈ ವೇಳೆ ವ್ಯಕ್ತಿಯೋರ್ವ ಜಗಳ ಬಿಡಿಸಲು ಹೋಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಕಲ್ಲನ್ನು ಎಸೆದು ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ವಲಸೆ ಕಾರ್ಮಿಕರ ಮಾರಾಮಾರಿ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more