ಶಾಸಕ ಅಖಂಡ ಶ್ರೀನಿವಾಸಮೂರ್ತಿಯನ್ನ ಮುಗಿಸಲು ಬಂದಂತಿದೆ: ಸಚಿವ ಅಶೋಕ್

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಹಿಂಸಾಚಾರದಲ್ಲಿ ಗಲಭೆಕೋರರು ಶಾಸಕ ಅಖಂಡ ಶ್ರೀನಿವಾಸಮೂರ್ತಿಯನ್ನ ಮುಗಿಸಲು ಬಂದಂತಿದೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ R​ ಅಶೋಕ್​ ಹೇಳಿದ್ದಾರೆ.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೌಮ್ಯ ಸ್ವಭಾವದವರು. ನಿನ್ನೆ ಘಟನೆಯಿಂದ ಅವರ ಅಣ್ಣ-ತಮ್ಮಂದಿರು ಬೀದಿಪಾಲಾಗಿದ್ದಾರೆ. ಕಿಡಿಗೇಡಿಗಳು ಅವರ ಮನೆಗಳಲ್ಲೂ ಲೂಟಿ ಮಾಡಿದ್ದಾರೆ. ಜೊತೆಗೆ, ಮನೆಗಳಲ್ಲಿ ಇದ್ದ ವಸ್ತುಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅಶೋಕ್​ ಹೇಳಿದರು.
ಶಾಸಕ ಅಖಂಡ ಶ್ರೀನಿವಾಸಮೂರ್ತಿಯನ್ನ ಗಲಭೆಕೋರರು ಮುಗಿಸಲು ಬಂದಂತಿದೆ. ಈಗಾಗಲೇ 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಕೇರಳ ಸೇರಿದಂತೆ ಹೊರಗಿನಿಂದ ಬಂದವರು ಇದ್ದಾರೆ. ನಗರವನ್ನ ತಲ್ಲಣಗೊಳಿಸಬೇಕೆಂದು ಇಂಥ ಕೃತ್ಯಕ್ಕೆ ಕುಮ್ಮಕ್ಕು ನೀಡಲಾಗಿದೆ. ಆದರೆ, ಇಂಥ ಕೃತ್ಯ ಎಸಗುವ ಯಾರನ್ನೂ ಸರ್ಕಾರ ಸುಮ್ಮನೆ ಬಿಡಲ್ಲ. ಪೊಲೀಸರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಶಿವಾಜಿನಗರದಲ್ಲಿ ಕೃತ್ಯಕ್ಕೆ ಹುನ್ನಾರ ನಡೆಸಲಾಗಿದೆ. ಆದರೆ, ಎಲ್ಲದಕ್ಕೂ ಪೊಲೀಸರು ಕಡಿವಾಣ ಹಾಕಿದ್ದಾರೆ. ಕಿಡಿಗೇಡಿಗಳನ್ನ ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಲು ಸಿಎಂ ಸೂಚಿಸಿದ್ದಾರೆ ಎಂದು ಅಶೋಕ್​ ಸ್ಪಷ್ಟಪಡಿಸಿದರು.

ಈ ಘಟನೆ ಹಿಂದೆ ಇರುವ ಯಾರನ್ನೂ ಬಿಡಬಾರದು. ಶಾಸಕರು ಮತ್ತು ಅವರ ಕುಟುಂಬವನ್ನು ಟಾರ್ಗೆಟ್​ ಮಾಡಲಾಗಿದೆ. ಬೆಂಗಳೂರಿಗರನ್ನ ಬೆದರಿಸಬೇಕೆಂದು ಇಂಥ ಕೃತ್ಯಕ್ಕೆ ಕೈಹಾಕಲಾಗಿದೆ. ಸಿಎಂ ಭೇಟಿ ಬಳಿಕ ಮುಂದಿನ ತನಿಖೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಜೊತೆಗೆ ಶಾಸಕರಿಗೆ, ಎಲ್ಲ ರೀತಿಯ ರಕ್ಷಣೆ ನೀಡುವುದಾಗಿ ಸರ್ಕಾರದಿಂದ ಭರವಸೆ ಕೊಟ್ಟಿದ್ದೇವೆ ಎಂದು ಹೇಳಿದರು.

‘ಕಿಡಿಗೇಡಿಗಳನ್ನ ಬಂಧಿಸಿ ಜೈಲಿಗೆ ಕಳಿಸೋವರೆಗೂ ಬಿಡಲ್ಲ’
ಕಿಡಿಗೇಡಿಗಳನ್ನ ಬಂಧಿಸಿ ಜೈಲಿಗೆ ಕಳಿಸೋವರೆಗೂ ಬಿಡಲ್ಲ. ಇಂಥ ಕೃತ್ಯ ಮಾಡುವುದು ನಕ್ಸಲರು ಮಾತ್ರ. ಈ ರೀತಿ ಮಾಡಿದ್ದಾರೆ ಅಂದರೆ ಯಾವ ಮಟ್ಟಕ್ಕೆ ಬಂದಿದ್ದಾರೆ ಎಂದು ತಿಳಿಯುತ್ತದೆ. ಸದ್ಯ ಎಲ್ಲ ಪ್ರದೇಶಗಳು ಸಂಪೂರ್ಣ ನಿಯಂತ್ರಣದಲ್ಲಿದೆ. ಡಿಸಿಪಿಯನ್ನು ಕೂಡಿ ಹಾಕ್ತಾರೆಂದರೆ ಅವರು ದೇಶದ್ರೋಹಿಗಳು . ದೇಶದ್ರೋಹಿಗಳಿಗೆ ಬುದ್ಧಿ ಕಲಿಸುವ ಕೆಲಸ ಮಾಡುತ್ತೇವೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಸಮುದಾಯದ ವಿರುದ್ಧ ಅವಹೇಳನಾಕಾರಿ ಪೋಸ್ಟ್: ಪುಲಿಕೇಶಿ ನಗರ MLA ಮನೆ, DJ ಹಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ, ಪೊಲೀಸ್‌ ಫೈರಿಂಗ್‌ಗೆ 2 ಬಲಿ

‘ಅಖಂಡ ಶ್ರೀನಿವಾಸಮೂರ್ತಿಯವರನ್ನ ಮುಗಿಸಲೇಬೇಕು ಅಂತ ಬಂದಿದ್ದಾರೆ’ R Ashok in press meet on Bengaluru violenceVideo Link ►…

Tv9Kannada यांनी वर पोस्ट केले बुधवार, १२ ऑगस्ट, २०२०

Related Tags:

Related Posts :

Category: