‘ಇದು ಟ್ರೈಲರ್ ಅಷ್ಟೇ.. 5-6 ದಿನ ಕಳೆದರೆ R.R. ನಗರದಲ್ಲಿ ಕಾಂಗ್ರೆಸ್‌ಗೆ ಬೂತ್ ಏಜೆಂಟ್ ಸಹ ಸಿಗಲ್ಲ’

ಬೆಂಗಳೂರು: ಕಾಂಗ್ರೆಸ್‌ಗೆ ಒಬ್ಬ BBMP ಸದಸ್ಯನನ್ನ ಉಳಿಸಿಕೊಳ್ಳಲು ಆಗಿಲ್ಲ. 5-6 ದಿನ ಕಳೆದರೆ ಕಾಂಗ್ರೆಸ್‌ಗೆ ಬೂತ್ ಏಜೆಂಟ್ ಸಹ ಸಿಗಲ್ಲ ಎಂದು ರಾಜರಾಜೇಶ್ವರಿನಗರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.

ಸಂಸದ ಸುರೇಶ್ ತಾನು R.R. ನಗರ ಅಭ್ಯರ್ಥಿ ಅಂದುಕೊಂಡಿದ್ದಾರೆ. ಹೀಗಾಗಿ, ತಮ್ಮ ಅಭ್ಯರ್ಥಿಯನ್ನೇ ಅವರು ತಿರಸ್ಕರಿಸಿದ್ದಾರೆ. ಸಂಸದ ಸುರೇಶ್‌ಗೆ 2 ಬಾರಿ ಮೈನಸ್ ವೋಟ್‌ ಬಂದಿತ್ತು. ಆದರೆ, ಈ ಬಾರಿ ಸುರೇಶ್​ ಅಟ್ಟರ್ ಫ್ಲಾಪ್ ಆಗುತ್ತಾರೆ ಎಂದು R. ಅಶೋಕ್ ಟಾಂಗ್​ ಕೊಟ್ಟಿದ್ದಾರೆ.

ಈಗ ಹಲವು ಕಾಂಗ್ರೆಸ್, ಜೆಡಿಎಸ್ ಮುಖಂಡರು ಬಿಜೆಪಿಗೆ ಬಂದಿದ್ದಾರೆ. ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿಗೆ ಸೇರಿಕೊಂಡಿದ್ದಾರೆ. ಇದು ಟ್ರೈಲರ್ ಅಷ್ಟೇ, 3-4 ದಿನದಲ್ಲಿ ಸಿನಿಮಾ ತೋರಿಸ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

40-50 ಸಾವಿರ ಲೀಡ್ ಕೊಟ್ಟು ಮುನಿರತ್ನರನ್ನ ಗೆಲ್ಲಿಸುತ್ತೇವೆ. ಡಿ.ಕೆ. ಬ್ರದರ್ಸ್‌ಗೆ ಫೇಲ್ಯೂರ್ ಮೇಲೆ ಫೇಲ್ಯೂರ್ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಕೈ ಸುಟ್ಟುಕೊಳ್ಳಲು ಹೋಗಬೇಡಿ ಎಂದು ಅಶೋಕ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್​ಗೆ ಟಾಂಗ್​ ಕೊಟ್ಟಿದ್ದಾರೆ.

Related Tags:

Related Posts :

Category:

error: Content is protected !!