ಯಡಿಯೂರಪ್ಪಗೆ ಕ್ಯಾಚ್ ಹಾಕೋದೂ ಗೊತ್ತು, ರೈಡ್ ಮಾಡೋದು ಗೊತ್ತು: ಅಶೋಕ್

ಕೊಪ್ಪಳ: ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕ್ಯಾಚ್ ಹಾಕೋದೂ ಗೊತ್ತು, ರೈಡ್ ಮಾಡೋದು ಗೊತ್ತು! ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಯಡಿಯೂರಪ್ಪ ಕಬಡ್ಡಿ ತಂಡದ ಕ್ಯಾಪ್ಟನ್. ಅವರಿಗೆ ಕ್ಯಾಚ್ ಹಾಕೋದೂ ಗೊತ್ತು, ರೈಡ್ ಮಾಡೋದು ಗೊತ್ತು. ನಾನು ಯಾವಗೋ ಹೇಳಿದೀನಿ.. ಯಡಿಯೂರಪ್ಪ ರಾಜಾಹುಲಿ ಅಂತಾ. ಅವರು ಒಂದ ತರಹ ಕಬಡ್ಡಿ ಟೀಂ ಕ್ಯಾಪ್ಟನ್ ಇದ್ದಹಾಗೆ ಎಂದು ಅಶೋಕ್ ವ್ಯಾಖ್ಯಾನಿಸಿದ್ದಾರೆ.

ಮುಂದಿನ ಮೂರು ವರ್ಷಕ್ಕೂ ಯಡಿಯೂರಪ್ಪನೇ ಸಿಎಂ
ನಮ್ಮ‌ ಕರ್ನಾಟಕ ಹಣಕಾಸಿನ ವಿಷಯದಲ್ಲಿ ಇಡೀ ದೇಶದಲ್ಲಿ ಮಾದರಿಯಾಗಿರುತ್ತೆ. ಇವತ್ತು ಯಡಿಯೂರಪ್ಪ ಕೇಂದ್ರ ಸರ್ಕಾರದ ಮುಖ್ಯಸ್ಥರನ್ನು ಭೇಟಿ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ಮನವೊಲಿಸಿ ಹೆಚ್ಚು ಹಣ ತರ್ತಾರೆ ಎಂದು ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಇಲ್ಲ. ಮುಂದಿನ ಮೂರು ವರ್ಷಕ್ಕೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದೂ ಅಶೋಕ್ ಸ್ಪಷ್ಟಪಡಿಸಿದರು.

Related Tags:

Related Posts :

Category: