‘ಸಾಂತ್ವನ’ ಕೇಂದ್ರದಲ್ಲಿ ತಬ್ಬಿಕೊಂಡು ಪರಸ್ಪರ ಬೀಳ್ಕೊಟ್ಟ ನಟಿಮಣಿಯರು

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಲಯವು ನಟಿ ರಾಗಿಣಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಜೊತೆಗೆ, ನಟಿ ಸಂಜನಾಳನ್ನು ಸಿಸಿಬಿ ಕಸ್ಟಡಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ನಟಿಮಣಿಯರಿಬ್ಬರೂ ಕೋರ್ಟ್​ ತೀರ್ಪಿನ ಬಳಿಕ FSLನಿಂದ ತೆರಳುವುದಕ್ಕೂ ಮುನ್ನ ಪರಸ್ಪರ ಅಪ್ಪಿಕೊಂಡು ಬೀಳ್ಕೊಟ್ಟಿದ್ದಾರೆ.

ಒಂದೇ ಗೂಡಿನ ಹಕ್ಕಿಗಳಿಗೆ ಈಗ ವಿರಹ ವೇದನೆ ಕಾಡುತ್ತಿದ್ದು, ಬಂಧನಕ್ಕೊಳಗಾದ ಮೊದ ಮೊದಲು ಅಸಮಾಧಾನದಲ್ಲಿದ್ದ ನಟಿಯರು ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ದಿನಕಳೆದಂತೆ ಒಬ್ಬರಿಗೊಬ್ಬರು ಸ್ಪಂದಿಸುತ್ತಾ ಸ್ನೇಹಿತರಾಗಿದ್ದರು.

ಸದ್ಯ ರಾಗಿಣಿಯನ್ನು ಜೈಲಿಗೆ ಕಳುಹಿಸಲಾಗಿದ್ದು, ಸಂಜನಾಳನ್ನು ಕಸ್ಟಡಿಗೆ ನೀಡಲಾಗಿದೆ. ಹೀಗಾಗಿ, ರಾಗಿಣಿ ಮತ್ತು ಸಂಜನಾ ಒಬ್ಬರನ್ನೊಬ್ಬರು ಬಿಟ್ಟುಹೋಗುವಾಗ ಬೇಸರ ವ್ಯಕ್ತಪಡಿಸ್ತಿದ್ದಾರೆ.

ಬಣ್ಣದ ಲೋಕದ ಬೆಡಗಿಯರ ಬದುಕು ಈಗ ಜೈಲುಪಾಲಾಗಿದ್ದು, ರೀಲಲ್ಲಿ ಪೊಲೀಸ್..ರಿಯಲ್ ಲೈಫ್​ನಲ್ಲಿ ಖೈದಿ ಎಂಬಂತೆ ಆಗಿದೆ ರಾಗಿಣಿಯ ಸದ್ಯದ ಪರಿಸ್ಥಿತಿ. ರಾಗಿಣಿ ಐಪಿಎಸ್ ಸಿನಿಮಾದಲ್ಲಿ ರಾಗಿಣಿ ಪೊಲೀಸ್ ಆಫಿಸರ್ ಆಗಿ ನಟಿಸಿದ್ದರು. ಆದರೆ ಈಗ ಆಪರಾಧಿ ಸ್ಥಾನದಲ್ಲಿ ನಿಂತು ಜೈಲು ಸೇರಲಿದ್ದಾರೆ.

Related Tags:

Related Posts :

Category: