ನಟಿಮಣಿಯರಿಗೆ ಜೈಲಿನಲ್ಲೇ ದಸರಾ ಸಂಭ್ರಮ: ದೇವರ ದರ್ಶನ, ನಂತರ ಹೋಳಿಗೆ ಊಟ!

  • KUSHAL V
  • Published On - 17:31 PM, 25 Oct 2020

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಇಂದು ಜೈಲಿನಲ್ಲಿಯೇ ದಸರಾ ಹಬ್ಬವನ್ನು ಆಚರಿಸಿದರು.

ನಟಿಯರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದೇವಾಲಯಕ್ಕೆ ಭೇಟಿಕೊಟ್ಟರು. ದೇವರ ದರ್ಶನ ಪಡೆದ ಬಳಿಕ ನಟಿಮಣಿಯರಿಗೆ ಹಬ್ಬದೂಟ ಸವಿಯುವ ಅವಕಾಶ ಸಹ ದೊರೆಯಿತು. ಹಬ್ಬದ ಪ್ರಯಕ್ತ ಜೈಲಿನಲ್ಲಿ ಹೋಳಿಗೆ, ಚಪಾತಿ, ಪಲ್ಯಾ, ಅನ್ನ ರಸಂ ಅಡುಗೆ ತಯಾರಿಸಲಾಗಿತ್ತು.