ಯಾರು ಸತ್ತರೂ ಪ್ರಧಾನಿ ಮೋದಿ ಮೇಲೆ ಪರಿಣಾಮ ಬೀರುವುದಿಲ್ಲ: ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ತಮ್ಮ ಟ್ವೀಟಾಸ್ರ ಮುಂದುವರಿಸಿದ್ದಾರೆ. ಆದರೆ, ಅವರೀಗ ಭಾರತದಲ್ಲಿಲ್ಲ ಅನ್ನೋದು ಬೇರೆ ಮಾತು. ನಾನೆಲ್ಲಿದ್ದರೂ ಟ್ವೀಟಿಸುವುದನ್ನು ಬಿಡಲಾರೆ ಎನ್ನುವಂತಿದೆ ರಾಹುಲ್​ರ ಧೋರಣೆ. ಇಂದಿನ ಟ್ವೀಟ್​ನಲ್ಲಿ ಅವರು ಲಾಕ್​ಡೌನ್ ಅವಧಿಯಲ್ಲಿ ಎಷ್ಟು ಜನ ವಲಸೆ ಕಾರ್ಮಿಕರು ಮೃತಪಟ್ಟರೆನ್ನುವ ಬಗ್ಗೆ ಗೊತ್ತಿದೆಯೇ ಅಂತ ಪ್ರಧಾನಿಯವರನ್ನು ಕೇಳಿದ್ದಾರೆ.

‘‘ಲಾಕ್‌ಡೌನ್ ವೇಳೆ ಎಷ್ಟು ವಲಸೆ ಕಾರ್ಮಿಕರು ಮರಣ ಹೊಂದಿದರು, ಎಷ್ಟು ಜನ ಉದ್ಯೋಗ ಕಳೆದುಕೊಂಡರೆಂಬ ಅರಿವು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕಿಲ್ಲ್ಲ. ಸಾವುಗಳ ಬಗ್ಗೆ ಕೇಂದ್ರ ಸರ್ಕಾರ ಲೆಕ್ಕ ಹಾಕದಿದ್ದರೆ ಅವು ಸಾವೆನಿಸಲಾರವೇ? ಯಾರೇ ಸತ್ತರೂ ಮೋದಿ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ, ಇದಕ್ಕಿಂತ ದುಃಖದ ವಿಷಯ ಮತ್ತೊಂದಿಲ್ಲ’’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ವಲಸೆ ಕಾರ್ಮಿಕರು ಮೃತಪಟ್ಟಿದ್ದನ್ನು ಇಡೀ ವಿಶ್ವವೇ ಕಂಡಿದೆ ಆದರೆ ಆ ಸಾವುಗಳು ಕೇವಲ ಮೋದಿ ಸರ್ಕಾರಕ್ಕೆ ಮಾತ್ರ ಕಂಡಿಲ್ಲ ಅಂತ ರಾಹುಲ್ ಕಟಕಿಯಾಡಿದ್ದಾರೆ.

Related Tags:

Related Posts :

Category: