‘ಶಂಕರ್ ಇಲ್ಲದಿರುವ ನೋವು ಕಾಡುತ್ತದೆ’ ಶಂಕ್ರಣ್ಣನ ನೆನಪಿಸಿಕೊಂಡ ಸೀತಾಮಾತೆ!

ಜನಪ್ರಿಯ ಧಾರಾವಾಹಿ ರಾಮಾಯಣ ಮತ್ತೊಮ್ಮೆ ಕಿರುತೆರೆಯಲ್ಲಿ ಬಿರುಗಾಳಿಯನ್ನೆಬ್ಬಿಸಿದೆ. 80ರ ದಶಕದಲ್ಲಿ ಕಂಡಿದ್ದ ಯಶಸ್ಸಿಗಿಂತಲೂ ಈ ಬಾರಿ ಹೆಚ್ಚು ಜನಮನ ತಲುಪಿದೆ, Thanks to Corona virus!

ಇದೇ ವೇಳೆ ಅಂದು ರಾಮಾಯಣದ ಟೆಲಿ ಸೀರಿಯಲ್​ನಲ್ಲಿ ಒಬ್ಬಬ್ಬ ಪಾತ್ರಧಾರಿಗಳೂ ಮಿಂಚಿದ್ದರು. ರಾಮ ಸೀತೆಯಂತೂ ಅಕ್ಷರಶಃ ಪೂಜಿಸಲ್ಪಟ್ಟಿದ್ದರು. ಆ ದಿನಗಳನ್ನು ಮೆಲುಕು ಹಾಕುತ್ತಾ, ನೇಪಥ್ಯಕ್ಕೆ ಸರಿದಿದ್ದ ಕೆಲ ನಟ ನಟಿಯರು ಮತ್ತೆ ಜನರೆದುರು ಬಂದಿದ್ದಾರೆ, Thanks to Social Media!

ಮುಂದುವರೆದ ಭಾಗವಾಗಿ, ಅಂದು ಸೀತಾ ಮಾತೆಯಾಗಿದ್ದ ದೀಪಿಕಾ ಚಿಕ್ಲಿಯಾ ಟೋಪಿವಾಲಾ, ನಿನ್ನೆ ಒಂದು ಫೇಸ್​ಬುಕ್ ಪೋಸ್ಟ್ ಹಾಕಿದ್ದು ಅದರಲ್ಲಿ ದಿವಂಗತ ನಟ ಶಂಕರ್ ನಾಗ್ ಅವರನ್ನು ನೆನಪಿಸಿಕೊಂಡಿದ್ದಾರೆ. ಶಂಕ್ರಣ್ಣನ ಜೊತೆ ನಾಯಕಿಯಾಗಿ ನಟಿಸಿದ್ದ ‘ಹೊಸ ಜೀವನ’ ಸಿನಿಮಾದ ಶೋಟಿಂಗ್ ಸಮಯವನ್ನು ನೆನಪಿಸಿಕೊಂಡಿದ್ದಾರೆ.

ಹೊಸ ಜೀವನ ಚಿತ್ರದ ಲಾಲಿ ಲಾಲಿ ಲಾಲಿ ಜೋ.. ನನ್ನ ಬಾಳಿನ ಬಂಗಾರ ಜೋ.. ಹಾಡನ್ನು ತಮ್ಮ ಫೇಸ್​ಬುಕ್ ಪೇಜ್​ನಲ್ಲಿ ಹಂಚಿಕೊಂಡಿದ್ದಾರೆ: ಈ ಹಾಡು ಹೊಸ ಜೀವನ ಚಿತ್ರದ್ದು. ಈ ಸಿನಿಮಾದ ಲಾಸ್ಟ್ ಶೆಡ್ಯೂಲ್‌ ಮುಗಿಸಿದ ನಂತರ ನಟ ಶಂಕರ್ ನಾಗ್ ಅವರು ಕಾರು ಅಪಘಾತದಲ್ಲಿ ಮೃತಪಟ್ಟರು. ಆ ಸುದ್ದಿ ಕೇಳಿ ನನಗೆ ನಂಬಲೇ ಆಗಲಿಲ್ಲ, ಶಾಕ್‌ಗೆ ಒಳಗಾಗಿದ್ದೆ. ಅದರಿಂದ ಹೊರಬರಲು ತುಂಬ ಸಮಯ ಬೇಕಾಯ್ತು. ಹೊಸ ಜೀವನ  ಸಿನಿಮಾ ನನ್ನ ಕರಿಯರ್‌ನ ದೊಡ್ಡ ಹಿಟ್ ಸಿನಿಮಾ. ಆದರೆ ಶಂಕರ್ ನಾಗ್ ಇಲ್ಲದಿರುವ ನೋವು ಕಾಡುತ್ತದೆ ಎಂದು ಕಂಬನಿ ಮಿಡಿದಿದ್ದಾರೆ.

This song is from a movie,,,, hossa jeevan ,afrt the wrap up of the last schedule my co star met with an accident and passed away , I was numb with shock for a long time to come …not to mention it went in history as a great hit …but what a loss we suffered ……co star ….shankernag #movie#films#actor#songs#music#hit #shankernag #kannada #loss#death#sad

Dipika Chikhlia Topiwala यांनी वर पोस्ट केले मंगळवार, १२ मे, २०२०

Related Posts :

Category:

error: Content is protected !!