ರಾಣಾ ಆರೋಗ್ಯ ಈಗ ಹೇಗಿದೆ? ರಾಣಾಗೆ ಖುಷಿ ಕೊಟ್ಟ ಆ ಸಂಗತಿ ಯಾವುದು!?

ಬಾಹುಬಲಿ ಚಿತ್ರದಲ್ಲಿ ಬಲ್ಲಾಳದೇವನಾಗಿ ಮಿಂಚಿದ್ದ ನಟ ರಾಣಾ ದಗ್ಗುಬಾಟಿ ಕಳೆದ ವರ್ಷ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಆಗ ರಾಣಾಗೆ ಕಿಡ್ನಿ ಕಸಿ ಅಗತ್ಯವಿತ್ತು. ತನ್ನ ಮಗನಿಗಾಗಿ ಕಿಡ್ನಿಯನ್ನು ದಾನ ಮಾಡಲು ತಾಯಿ ಲಕ್ಷ್ಮೀ ಮುಂದಾಗಿದ್ದರು. ಅಮೆರಿಕದ ಚಿಕಾಗೋದ ಆಸ್ಪತ್ರೆಯಲ್ಲಿ ರಾಣಾ ಅವರು ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ, ಅಪಾಯದಿಂದ ಪಾರಾಗಿದ್ದರು.

ಕಿಡ್ನಿ ಶಸ್ತ್ರ ಚಿಕಿತ್ಸೆ ಬಳಿಕ ರಾಣಾ ದಗ್ಗುಬಾಟಿ ಅವರ ಆರೋಗ್ಯ ಸುಸ್ಥಿರವಾಗಿದೆ. ಇದರಿಂದ ತಮ್ಮ ಸಿನಿಮಾ ಶೂಟಿಂಗ್ ಕಾರ್ಯಗಳಲ್ಲಿ ರಾಣಾ ಸಕ್ರಿಯವಾಗಿ ಭಾಗಿಯಾಗುತ್ತಿದ್ದಾರೆ. ದೇಹಾರೋಗ್ಯ ಮರಳಿ ಗಳಿಸಿರುವ ರಾಣಾ ಮುಂದುವರಿದ ಭಾಗವಾಗಿ ಈಗ ತಮ್ಮ ವೈಯಕ್ತಿಕ ಜೀವನದಲ್ಲಿ ಮಹತ್ತರ ಘಟ್ಟ ಪ್ರವೇಶಿಸಿದ್ದಾರೆ.

Lockdown to Wedlock
ಈಗ ಲಾಕ್​ಡೌನ್ ಸಂದರ್ಭದಲ್ಲಿ ನಟ ರಾಣಾ ದಗ್ಗುಬಾಟಿ ಖುಷಿಯ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಮನದರಸಿ ಯಾರೆಂದು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದಾರೆ. ಪ್ರೀತಿಸಿದ ಹುಡುಗಿ ತನಗೆ ಓಕೆ ಹೇಳಿದ್ದಾಳೆಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್ ಮಾಡಿ ಬರೆದುಕೊಂಡಿದ್ದಾರೆ. ಸ್ನೇಹಿತೆ ಮಿಹೀಕಾ ಬಜಾಜ್ ಜೊತೆ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ರಾಣಾ ಸಜ್ಜಾಗಿದ್ದಾರೆ.

ಯಾರಿದು ಜೂನಿಯರ್ ಬಂಟಿ?
ಹೈದರಾಬಾದ್ ಮೂಲದ ಮಿಹೀಕಾ ಮುಂಬೈನಲ್ಲಿ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಿಹೀಕಾಗೆ ಭಾರತೀಯ ಸಂಪ್ರದಾಯ ಹಾಗೂ ಸಂಸ್ಕೃತಿ ಮೇಲೆ ಹೆಚ್ಚು ಆಸಕ್ತಿಯಿದೆ. ಮುಂಬೈನಲ್ಲಿ ಇಂಟೀರಿಯರ್ ಡಿಸೈನ್​ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಬಳಿಕ ಲಂಡನ್​ನಲ್ಲಿ ಮಿಹೀಕಾ ಎಂಎ ಮಾಡಿದ್ದಾರೆ.

ಮಿಹೀತಾ ಖ್ಯಾತ ಮಹಿಳಾ ಉದ್ಯಮಿ ಬಂಟಿ ಬಜಾಜ್ ಪುತ್ರಿ. ಚಿನ್ನಾಭರಣ ಉದ್ಯಮದಲ್ಲಿ ಬಂಟಿದು ದೊಡ್ಡ ಹೆಸರು. ಈ ಕುಟುಂಬದವರು ಟಾಲಿವುಡ್​ಗೆ ಹೊಸಬರೇನೂ ಅಲ್ಲ. ಸಿನಿತಾರೆಯರ ಜೊತೆ ನಿಕಟ ಸಂಪರ್ಕ ಇದೆ. ಕೊರೊನಾ ಸಂಕಷ್ಟ ದೂರವಾದ ಮೇಲೆ ಎರಡೂ ಕುಟುಂಬದವರು ಮುದುವೆ ದಿನಾಂಕ ನಿಶ್ಚಯಿಸಲಿದ್ದಾರೆ ಎಂದು ತಿಳಿದುಬಂದಿದೆ.

View this post on Instagram

And she said Yes 🙂 ❤️#MiheekaBajaj

A post shared by Rana Daggubati (@ranadaggubati) on

 

Related Posts :

Category:

error: Content is protected !!