ಮದುವೆ ಆಲೋಚನೆಯಲ್ಲಿ.. ಸಲ್ಮಾನ್ ಖಾನ್ ಹಾದಿ ತುಳಿಯುತ್ತಾರಾ ರಶೀದ್ ಖಾನ್?

T20 ಕ್ರಿಕೆಟ್​ನ ನಂ.1 ಬೌಲರ್ ಆಗಿರೋ ಅಫ್ಘಾನಿಸ್ತಾನ ತಂಡದ ರಶೀದ್​ ಖಾನ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇನ್ನಿಲ್ಲದಂತೆ ಟ್ರೋಲ್ ಆಗ್ತಿದ್ದಾರೆ. ಯಾಕಾದ್ರೂ ಅಂಥದ್ದೊಂದು ಹೇಳಿಕೆ ನೀಡದ್ನೋ ಅಂತಾ ರಶೀದ್ ಹಣೆಹಣೆ ಚೆಚ್ಚುಕೊಳ್ಳೋ ಪರಿಸ್ಥಿತಿ ಎದುರಾಗಿದೆ.

ಅಷ್ಟಕ್ಕೂ ರಶೀದ್ ಖಾನ್ ಹೇಳಿದ್ದೇನು ಗೊತ್ತಾ?
ಸೋಷಿಯಲ್ ಮೀಡಿಯಾದಲ್ಲಿ ರಶೀದ್ ಖಾನ್ ತಮ್ಮ ಮದುವೆ ವಿಚಾರದ ಬಗ್ಗೆ ಆಡಿದ ಮಾತುಗಳೇ ಇದೀಗ ಅವರನ್ನು ನೆಟ್ಟಿಗರು ಟ್ರೋಲ್​ ಮಾಡುವಂತೆ ಆಗಿರೋದು. ನಾನು ಪ್ರೀತಿ ಮಾಡೋದು ಅಥವಾ ಮದುವೆಯಾಗೋ ಬಗ್ಗೆ ಯೋಚಿಸೋದು ನನ್ನ ತಂಡ ವಿಶ್ವಕಪ್ ಗೆದ್ದ ಬಳಿಕವೇ ಎಂದು ಹೇಳಿಕೊಂಡಿದ್ದಾರೆ. ರಶೀದ್ ಖಾನ್ ನೀಡಿದ ಇದೇ ಹೇಳಿಕೆ ಇದೀಗ  ಆತ ಟ್ರೋಲ್​ ಆಗುವಂತೆ ಮಾಡಿರೋದು. ಜೊತೆಗೆ, ಅವರ ಹೇಳಿಕೆಗೆ ಕ್ರಿಕೆಟ್ ಅಭಿಮಾನಿಗಳು ರಶೀದ್​ ಇದೀಗ ಸಲ್ಮಾನ್ ಖಾನ್ ಅಭಿಮಾನಿಯಾಗಿದ್ದಾರೆ ಅನ್ಸುತ್ತೆ ಅಂತಾ ಕಾಲೆಳೆದಿದ್ದಾರೆ.

ಇನ್ನು ಕೆಲವರು ಅಫ್ಘಾನಿಸ್ತಾನ ತಂಡ ವಿಶ್ವಕಪ್ ಗೆಲ್ಲೋ ತನಕ ಮದುವೆಯಾಗಲ್ಲ ಅಂತಿದ್ದೀರಾ ? ಒಂದು ವೇಳೆ ವಿಶ್ವಕಪ್ ಗೆಲ್ಲದಿದ್ರೆ ಏನ್ ಮಾಡ್ತೀರಾ ಅಂತಾ ಅವರಿಗೆ ಮರು ಪ್ರಶ್ನೆ ಹಾಕುವ ಮೂಲಕ ಟ್ರೋಲ್ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅಫ್ಘಾನಿಸ್ತಾನ ತಂಡ ಹೇಳಿಕೊಳ್ಳುವಂಥ ಸಾಧನೆ ಮಾಡಿಲ್ಲ ನಿಜ. ಆದ್ರೆ ಅಫ್ಘಾನಿಸ್ತಾನ ತಂಡದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿರುವಂಥ ಸ್ಟಾರ್ ಆಟಗಾರರಿದ್ದಾರೆ ಅನ್ನೋದನ್ನ ಅಲ್ಲಗಳೆಯೋ ಹಾಗಿಲ್ಲ. ಹೀಗಾಗಿ ಅವರು ಮುಂದಿನ ವಿಶ್ವಕಪ್​ಗೂ ಮುನ್ನ ಬಲಿಷ್ಠ ತಂಡವಾಗಿ ರೂಪಗೊಂಡು ವಿಶ್ವಕಪ್ ಗೆದ್ರೇ, ರಶೀದ್​ಗೆ ಶಾದಿ ಭಾಗ್ಯ ಸಿಗಲಿದೆ. ಇಲ್ಲಾ ಅಂದ್ರೆ, ರಶೀದ್ ಖಾನ್ ಮಾತಿಗೆ ತಪ್ಪಿ ಮದುವೆಯಾದ್ರೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಟ್ರೋಲ್ ಆಗೋದ್ರಲ್ಲೇ ಡೌಟೇ ಇಲ್ಲ.

Related Tags:

Related Posts :

Category:

error: Content is protected !!