ಕೊರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಇಂದೇ ರೇಟ್ ಫಿಕ್ಸ್​ -ಆರೋಗ್ಯ ಸಚಿವ ರಾಮುಲು

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಕಂಡು ಸರ್ಕಾರ ದಂಗಾಗಿದೆ. ಸೋಂಕಿತರು ಹೀಗೆ ಹೆಚ್ಚುತ್ತಿದ್ರೆ ಸರ್ಕಾರಕ್ಕೆ ನಿಭಾಯಿಸೋದು ಭಾರೀ ಕಷ್ಟವಾಗಿದೆ.

ಇಂತಹ ಸಮಯದಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರ ಖಾಸಗಿ ಆಸ್ಪತ್ರೆಗಳ ಮೊರೆಹೋಗಿದೆ. ಸರ್ಕಾರಿ ಜೊತೆಗೆ ಖಾಸಗಿ ಆಸ್ಪತ್ರೆಗಳೂ ಚಿಕಿತ್ಸೆ ನೀಡಬಹುದು ಅಂತಿದೆ. ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್ 19ಗೆ ಚಿಕಿತ್ಸೆ ನೀಡುವಂತೆ ಸರ್ಕಾರದ ಮನವಿ ಮಾಡಿದೆ. ಆದ್ರೂ ಈ ವಿಷಯದಲ್ಲಿ ಒಮ್ಮತದ ನಿರ್ಧಾರಕ್ಕೆ ಬರೋದಕ್ಕೆ ಸಾಧ್ಯವಾಗುತ್ತಿಲ್ಲ.

ಕೊರೊನಾ ಸೋಂಕು ಚಿಕಿತ್ಸೆ ವಿಷಯದಲ್ಲಿ ಖಾಸಗಿ ಆಸ್ಪತ್ರೆಗಳು ಆಡಿದ್ದೇ ಆಟ ಎಂಬಂತಾಗಿದೆ. ಕೊರೊನಾ ಸೋಂಕಿತರನ್ನು ಚಿಕಿತ್ಸೆಗೆಂದು ಆಸ್ಪತ್ರೆ ಒಳಗೆ…

Tv9Kannada यांनी वर पोस्ट केले शुक्रवार, ५ जून, २०२०

ಆದ್ರೆ ಸರ್ಕಾರದ ಮನವಿಗೆ ಖಾಸಗಿ ಆಸ್ಪತ್ರೆಗಳು ಕ್ಯಾರೆ ಅಂತಿಲ್ಲ. ಮೊದಲು ಮನವಿ ತಳ್ಳಿ ಹಾಕಿದ ಆಸ್ಪತ್ರೆ ಒಕ್ಕೂಟಗಳಿಂದ ಸದ್ಯ ಸ್ಪಂದನೆ ನೀಡುತ್ತಿವೆ. ಅದ್ರೆ ಖಾಸಗಿ ಆಸ್ಪತ್ರೆಗಳು ದುಬಾರಿ ಮೊತ್ತ ಭರಿಸುವಲ್ಲಿ ಹಿಂದೇಟು ಹಾಕುತ್ತಿವೆ. ಹೀಗಾಗಿ ಸರ್ಕಾರ ಚಿಕಿತ್ಸಾ ವೆಚ್ಚ ನಿರ್ಧರಿಸುವಲ್ಲಿ ಜಟಾಪಟಿ ಮುಂದುವರಿದಿದೆ.

ಟಿವಿ9 ಇಂಪ್ಯಾಕ್ಟ್​:
ಕೊರೊನಾ ಚಿಕಿತ್ಸೆ ಸಂಬಂಧ ಇಂದೇ ದರ ನಿಗದಿ ಮಾಡುತ್ತೇವೆ. ರಾಜ್ಯ ಸರ್ಕಾರ ನಿಗದಿಪಡಿಸಿದ ದರಕ್ಕೆ ಚಿಕಿತ್ಸೆ ನೀಡಬೇಕು. ಬಿಪಿಎಲ್‌ ಕಾರ್ಡ್‌ ಇಲ್ಲದಿದ್ರೂ ಚಿಕಿತ್ಸೆ ಕೊಡಿಸುತ್ತೇವೆ. ನಿಗದಿಗಿಂತ ಹೆಚ್ಚಿನ ದರ ವಸೂಲಿ ಮಾಡಿದ್ರೆ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಟಿವಿ9ಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more