ಲಾಕ್‌ಡೌನ್‌ ಬ್ರೇಕ್​ನಲ್ಲಿ ನಟ ಉಪ್ಪಿ ತಮ್ಮ ಪ್ರೀತಿಯ ತೋಟದಲ್ಲಿ ಬದನೆಕಾಯಿ ಬೆಳೆದರು!

ಬೆಂಗಳೂರು: ಕೊರೊನಾ ವೈರಸ್‌ ಹೆಮ್ಮಾರಿಯಿಂದಾಗಿ ಇಡೀ ಜಗತ್ತೆ ತಲ್ಣಣಗೊಂಡಿದೆ, ಸ್ಥಬ್ಧಗೊಂಡಿದೆ. ಇದಕ್ಕೆ ಯಾವುದೇ ಕ್ಷೇತ್ರ ಮತ್ತು ದೇಶಗಳು ಹಾಗೂ ವ್ಯಕ್ತಿಗಳು ಹೊರತಲ್ಲ. ಆದ್ರೆ ನಮ್ಮ ಸ್ಯಾಂಡಲ್‌ವುಡ್‌ ಸ್ಟಾರ್‌ ಉಪೇಂದ್ರ ಮಾತ್ರ ಸ್ವಲ್ಪ ಡಿಫರೆಂಟ್‌. ಜಗತ್ತು ನಿಂತ್ರೆನಂತೆ, ಬ್ರೇಕ್‌ ಬಿದ್ರನೇಂತೆ, ನಮ್ಮ ಚಿಂತನೆಗೆ ಬ್ರೇಕ್‌ ಇಲ್ಲವಲ್ಲಾ ಅಂತಾರೆ. ಹಾಗಂತ ಸುಮ್ಮನೆ ಚಿಂತಿಸಿಲ್ಲ ಅದನ್ನ ಕಾರ್ಯರೂಪಕ್ಕೂ ಇಳಿಸಿದ್ದಾರೆ.

ಪುಸ್ತಕದ ಬದನೆಕಾಯಿ ಅಲ್ಲ, ತೋಟದಲ್ಲಿ ಬೆಳೆದ ಬದನೆ!
ಹೌದು ನಟ, ನಿರ್ದೇಶಕ ಮತ್ತು ನಿರ್ಮಾಪಕ ಉಪ್ಪಿ ಯಾವಗಲೂ ಸ್ವಲ್ಪ ವಿಭಿನ್ನವಾಗೇ ಯೋಚಿಸೋದು. ತಮ್ಮ ಸಿನಿಮಾಗಳಲ್ಲಿ ಪ್ರೀತಿ ಅಂದ್ರೆ ಪುಸ್ತಕದ ಬದನೆಕಾಯಿಯಲ್ಲ ಅಂತಾನೆ ಸೈಲೆಂಟಾಗಿ ಪ್ರೀತಿಸಿ ಮದುವೆಯಾದ್ರು ಎರಡು ಮಕ್ಕಳೂ ಆದ್ವು.

ಭೂತಾಯಿ ಉಪೇಂದ್ರರ ಶ್ರಮಕ್ಕೆ ತಕ್ಕ ಫಲ ನೀಡಿದ್ದಾಳೆ
ಈಗ ಲಾಕ್‌ಡೌನ್‌ ಅಂತಾ ಮನೇಲಿ ಸುಮ್ಮನೇ ಕೂರೋ ಬದಲು ನಿಜವಾಗಿಯೂ ತಮ್ಮ ನೇಚ್ಚಿನ ಬದನೇಕಾಯಿ ಬೆಳಿದಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರೋ ತಾವರೆಕೆರೆ ಬಳಿಯಿರುವ ತಮ್ಮ 17 ಏಕರೆ ಜಮೀನಿನಲ್ಲಿ ಭೂತಾಯಿಯ ಮಗನಾಗಿ ಕೃಷಿ ಮಾಡಿದ್ದಾರೆ. ಅದೂ ಸಾವಯವ ಕೃಷಿ. ಅವರ ಈ ಎರಡು ತಿಂಗಳ ಶ್ರಮದ ಫಲವಾಗಿ ಈಗ ತೋಟ ನಳನಳಿಸುತ್ತಿದೆ. ಭೂತಾಯಿ ಉಪೇಂದ್ರರ ಶ್ರಮಕ್ಕೆ ತಕ್ಕ ಫಲ ನೀಡಿದ್ದಾಳೆ. ಇದನ್ನ ಉಪ್ಪಿ ತಮ್ಮ ಅಭಿಮಾನಿಗಳಿಗಾಗಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರೆ.

Related Tags:

Related Posts :

Category:

error: Content is protected !!