‘Mask ಹಾಕ್ಕೊಳ್ಳೀ ಇಲ್ಲಾ.. ಜೈಲಿಗೆ ಹೋಗಿ ಅಂತಾ ಶತಮಾನದ ಹಿಂದೆಯೇ ಹೇಳಿದ್ದೀವಿ’

ಕೊರೊನಾ ಮಹಾಮಾರಿ ಇಡೀ ಮಾನವ ಕುಲವನ್ನೇ ತನ್ನ ಕಬಂಧಬಾಹುವಿನಲ್ಲಿ ಬಂಧಿಸಿಬಿಟ್ಟಿದೆ. ಜಗತ್ತಿನಾದ್ಯಂತ ದಾಪುಗಾಲಿಡುತ್ತಾ ಮುನ್ನುಗ್ಗುತ್ತಿರುವ ಕೊರೊನಾ ವೈರಸ್​ನ ಹರಡುವಿಕೆಯನ್ನು ತಡೆಯಲು ಸದ್ಯಕ್ಕೆ ನಮ್ಮ ಬಳಿಯಿರುವ ಅಸ್ತ್ರವೆಂದರೆ ಅದು ಮಾಸ್ಕ್​.

ನಾವು Mask ಹಾಕ್ಕೊಳ್ಳಲ್ಲಾ.. ಅಂತಾ ಮೊಂಡಾಟ ಮಾಡುವವರಿಗೆ ಇದು ಎಚ್ಚರಿಕೆಯ ಗಂಟೆ
ಹೌದು, ಮಾಸ್ಕ್​ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಸದ್ಯಕ್ಕೆ ಈ ಹೆಮ್ಮಾರಿ ನಮ್ಮ ಹೆಗಲನ್ನೇರದಂತೆ ತಡೆಯಲು ಇರುವ ಅಸ್ತ್ರಗಳು. ಅಂದ ಹಾಗೆ, ಈ ಮಾಸ್ಕ್​ ಎಂಬ ಬ್ರಹ್ಮಾಸ್ತ್ರ ಕೇವಲ ಇಂದಿನ ಕಾಲದಲ್ಲಿ ಮಾತ್ರವಲ್ಲದೆ 1918ರಲ್ಲಿ ವಿಶ್ವವನ್ನೇ ನಲುಗಿಸಿದ್ದ ಸ್ಪ್ಯಾನಿಷ್ ಫ್ಲೂ ಮಹಾಮಾರಿಯ ವಿರುದ್ಧವೂ ಪರಿಣಾಮ ಕಾರಿ ಅಸ್ತ್ರವಾಗಿ ಮಾರ್ಪಟ್ಟಿತ್ತು.

ವಿಶ್ವದ ಪ್ರತಿಷ್ಠಿತ ಜನಸೇವಾಪರ ಸಂಸ್ಥೆ ಅಂತಾರಾಷ್ಟ್ರೀಯ ರೆಡ್​ ಕ್ರಾಸ್​ ಸ್ಪ್ಯಾನಿಷ್ ಫ್ಲೂ ಕಾಲದಲ್ಲಿ ಸಾರ್ವಜನಿಕರಿಗೆ ಮಾಸ್ಕ್​ ಧರಿಸುವಂತೆ ಸೂಚನೆ ನೀಡಿತ್ತು. ಇದೀಗ, ಅದೇ ಸೂಚನೆಯನ್ನು ಮತ್ತೊಮ್ಮೆ ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ಜೊತೆಗೆ, 1918ರಲ್ಲಿ ಹೇಳಿದ್ವಿ, 2020ರಲ್ಲೂ ಅದನ್ನೇ ಹೇಳುತ್ತೇವೆ. ಮಾಸ್ಕ್​ ಧರಿಸಿ, ಜೀವ ಉಳಿಸಿ ಎಂದು ಟ್ವೀಟ್​ ಮಾಡಿದೆ.

Related Tags:

Related Posts :

Category:

error: Content is protected !!