‘1928ರಲ್ಲಿ ಈ ಕೊರೊನಾ ಬಂದು ಹೋಗಿದೆ, ಸುಖಾಸುಮ್ಮನೆ ಯಾರನ್ನು ಕರೆದೊಯ್ಯುವುದಿಲ್ಲ’

ದಾವಣಗೆರೆ: ಕೊರೊನಾ ಹರಡದಂತೆ ತಡೆಯಲು ಸರ್ಕಾರ ಸಂಡೇ ಲಾಕ್​ಡೌನ್​ ಜಾರಿಗೊಳಿಸಿದೆ. ಆದರೆ, ಸಂಡೇ ಲಾಕ್​ಡೌನ್ ಉಲ್ಲಂಘಿಸಿ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಬಿಜೆಪಿ ಶಾಸಕ ರೇಣುಕಾಚಾರ್ಯ ಬೆಂಬಲಿಗರೊಂದಿಗೆ ಸುತ್ತಾಟ ನಡೆಸಿರುವ ಘಟನೆ ಜಿಲ್ಲೆಯ ಕೆಂಚಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಸೀಲ್​​ಡೌನ್ ಪ್ರದೇಶದಲ್ಲಿ ಓಡಾಟ, ಜನರಿಗೆ ಕೊರೊನಾ ಪಾಠ
ಸೀಲ್​ಡೌನ್ ಆಗಿರುವ ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮ ಪ್ರದೇಶದಲ್ಲಿ ತಮ್ಮ ಬೆಂಬಲಿಗರ ಜೊತೆ ಶಾಸಕ ಎಂ.ಪಿ‌.ರೇಣುಕಾಚಾರ್ಯ ಇವತ್ತು ಸುತ್ತಾಡಿದರು. ಕೆಂಚಿಕೊಪ್ಪ ಗ್ರಾಮದಲ್ಲಿ‌ ನಾಲ್ವರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಭೇಟಿಕೊಟ್ಟಿದ್ದರು. ಇದಲ್ಲದೆ, ಅಲ್ಲಿನ ಸ್ಥಳೀಯರಿಗೆ ಕೊರೊನಾ ಬಗ್ಗೆ ಪಾಠ ಮಾಡಲು ಸಹ ಮುಂದಾದರು.

1928ರಲ್ಲಿ ಈ ಕೊರೊನಾ ವೈರಸ್ ಬಂದು ಹೋಗಿದೆ. ಸುಖಾಸುಮ್ಮನೆ ಯಾರನ್ನೂ ಕರೆದೊಯ್ಯುವುದಿಲ್ಲ ಎಂದು ಅಲ್ಲಿನ ಜನರಿಗೆ ರೇಣುಕಾಚಾರ್ಯ ಧೈರ್ಯ ತುಂಬಲು ಮುಂದಾದರು. ಅಚ್ಚರಿಯೆಂದರೆ ಕೊರೊನಾ ವೈರಸ್​ ಜಗತ್ತಿನಲ್ಲಿ ಪತ್ತೆಯಾಗಿದ್ದು ಇತ್ತೀಚೆಗಷ್ಟೇ. ಹೀಗಾಗಿ, ಈ ಹಿಂದೆ ವೈರಸ್​ ಕಂಡು ಬರಲು ಹೇಗೆ ಸಾಧ್ಯ ಎಂದು ಸ್ಥಳೀಯರು ಅಚ್ಚರಿಪಟ್ಟರು.

Related Tags:

Related Posts :

Category:

error: Content is protected !!