ರೇಣುಕಾಚಾರ್ಯ ದೆಹಲಿಯಲ್ಲಿ, ರಾಜ್ಯ ಬಿಜೆಪಿ ಶಿಬಿರದಲ್ಲಿ ಗಲಿಬಿಲಿ

  • TV9 Web Team
  • Published On - 17:53 PM, 10 Sep 2020

ಬಿಜೆಪಿ ಶಾಸಕ ಹಾಗು ಮಾಜಿ ಸಚಿವ ಎಮ್ ಪಿ ರೇಣುಕಾಚಾರ್ಯ ಅವರ ದಿಢೀರ್ ದೆಹಲಿ ಭೇಟಿ ರಾಜಕೀಯ ವಲಯದಲ್ಲಿ ಅದರಲ್ಲೂ ವಿಶೇಷವಾಗಿ ರಾಜ್ಯ ಬಿಜೆಪಿ ಘಟಕದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಸುದ್ದಿಗಾರರೊಂದಿಗೆ ಮಾತಾಡುವಾಗ ತನ್ನ ಶಿಕ್ಷಣ ಸಂಸ್ಥೆಗಳ ಕೆಲಸದ ನಿಮಿತ್ತ ದೆಹಲಿಗೆ ಬಂದಿದ್ದೇನೆ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ, ಕೆಲವು ಸಚಿವರಿಗೆ ಕೊಕ್ ನೀಡಲಿದ್ದಾರೆ ಅನ್ನೋದು ಕೇವಲ ಮಾಧ್ಯಮಗಳ ವರದಿ, ತನಗೆ ಸಚಿವ ಸ್ಥಾನ ನೀಡಬೇಕೆಂದು ಯಾರನ್ನೂ ಒತ್ತಾಯ ಮಾಡಿಲ್ಲ, ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬದ್ಧನಾಗಿರುತ್ತೇನೆ ಅಂತ ರೇಣುಕಾಚಾರ್ಯ ಹೇಳಿದರಾದರೂ ಅವರ ಭೇಟಿಯ ವಿಚಾರಕ್ಕೆ ಅದಾಗಲೇ ರೆಕ್ಕೆಪುಕ್ಕಗಳು ಹುಟ್ಟಿಕೊಂಡಿವೆ.

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದ ಬಗ್ಗೆಯೂ ಮಾತನಾಡಿದ ಶಾಸಕರು, ‘‘ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರ ಇದೆ, ಹಾಗಾಗಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುವುದಕ್ಕೆ ನಮಗೆ ಅಡ್ಡಿಯಾಗದು. ಅವರು (ತಪ್ಪಿತಸ್ಥರು) ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ನಮ್ಮ ಸರ್ಕಾರ ಅವರನ್ನು ಬಂಧಿಸುತ್ತದೆ,’’ ಎಂದು ರೇಣುಕಾಚಾರ್ಯ ಹೇಳಿದರು.