ಬೆಂಗಳೂರಲ್ಲಿ ಹೊಂಡ ಬಿದ್ದ ರಸ್ತೆಗಳ ಫೋಟೋವನ್ನು ವಾಟ್ಸ್​ಆ್ಯಪ್​ ಮೂಲಕ ಕಳಿಸಿ; ಹೈಕೋರ್ಟ್​ ನಿಮ್ಮ ಸಹಾಯಕ್ಕೆ ಬರಲಿದೆ.. !

ಜನವರಿ 30 ರವರೆಗೆ ಮಾತ್ರ ಈ ಅವಕಾಶ ಲಭ್ಯವಿದೆ. ಈ ಅವಧಿಯೊಳಗೆ ಬೆಂಗಳೂರು ವಾಸಿಗಳು ತಾವು ಪಯಣಿಸುವ ರಸ್ತೆಗಳಲ್ಲಿನ ಹೊಂಡಗಳ ವಿವರವನ್ನು ಸಲ್ಲಿಸಬಹುದಾಗಿದೆ. 

  • TV9 Web Team
  • Published On - 18:01 PM, 14 Jan 2021
ಸಂಗ್ರಹ ಚಿತ್ರ

ಬೆಂಗಳೂರು: ಅಯ್ಯಪ್ಪಾ..ಇದೇನು ರಸ್ತೆಯೋ, ಕೆರೆಯೋ ಎಂದು ಪ್ರತಿದಿನ ಬೆಂಗಳೂರಿನಲ್ಲಿ ವಾಹನ ಓಡಿಸುವಾಗ ಅಲವತ್ತುಕೊಳ್ಳುತ್ತಿದ್ದೀರಾ? ಯಾರಿಗೆ ಹೇಳೋದು ಎಂದು ತಿಳಿಯದೆ ಬೇಸರಿಸಬೇಡಿ, ಕರ್ನಾಟಕ ಹೈ ಕೋರ್ಟ್​ ನಿಮಗೆ ಸಹಾಯ ಹಸ್ತ ಚಾಚಿದೆ. ಹೇಗಂತೀರಾ ಈ ಸುದ್ದಿ ಓದಿ.

ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳು ಕಂಡುಬಂದರೆ ನೀವು ಮಾಡಬೇಕಿರುವುದಿಷ್ಟೇ, https://api.whatsapp.com/send?phone=918095500118&text=helpbengaluru ಈ ವಾಟ್ಸ್​​ಆ್ಯಪ್​ ​ ಲಿಂಕ್​ಗೆ ಹೊಂಡ ಬಿದ್ದ ರಸ್ತೆಯ ಫೋಟೋ, ಸ್ಥಳದ ವಿವರ ಕಳುಹಿಸಿದರಾಯಿತು. ಜನವರಿ 30 ರವರೆಗೆ ಮಾತ್ರ ಈ ಅವಕಾಶ ಲಭ್ಯವಿದೆ. ಈ ಅವಧಿಯೊಳಗೆ ಬೆಂಗಳೂರು ವಾಸಿಗಳು ತಾವು ಪಯಣಿಸುವ ರಸ್ತೆಗಳಲ್ಲಿನ ಹೊಂಡಗಳ ವಿವರವನ್ನು ಸಲ್ಲಿಸಬಹುದಾಗಿದೆ.

ಏನಿದು ಪ್ರಕರಣ?
2015ರಲ್ಲಿ ಬೆಂಗಳೂರಿನ ಕಳಪೆ ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಕುರಿತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದನ್ನು ಹೂಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯ 2017ರಲ್ಲಿ ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಕುರಿತು ಸ್ವತಂತ್ರ ಸರ್ವೆಯೊಂದನ್ನು ನಡೆಸುವಂತೆ ಕರ್ನಾಟಕ ರಾಜ್ಯ ಕಾನೂನು ಸೇವಾ ಸಂಘಕ್ಕೆ ಆದೇಶಿಸಿತ್ತು. ಜನವರಿ 30ರೊಳಗೆ ಈ ಸರ್ವೆ ಮುಕ್ತಾಯವಾಗಲಿದ್ದು, ಅಷ್ಟರೊಳಗೆ ಹದಗೆಟ್ಟ ರಸ್ತೆಗಳ ವಿವರಗಳನ್ನು ಸಾರ್ವಜನಿಕರು ಕಳುಹಿಸಬಹುದಾಗಿದೆ. ಸಾರ್ವಜನಿಕರು ಹದಗೆಟ್ಟ ರಸ್ತೆಗಳ ಚಿತ್ರಗಳನ್ನು ಕಳುಹಿಸಿದರೆ ಉಚ್ಛ ನ್ಯಾಯಾಲಯಕ್ಕೆ ಫ್ರೂಫ್ ಒದಗಿಸಲು ಸಹಕಾರಿಯಾಗಲಿದೆ.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಆಲಿಸಿದ ನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶದ ಪ್ರಕಾರ ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಸುಸ್ಥಿತಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕರ್ತವ್ಯವಾಗಿದ್ದು, ಪ್ರತಿ ವಾರ್ಡ್​ಗೂ ಕಮಿಟಿ ರಚಿಸಿ ಸುವ್ಯವಸ್ಥೆ ಕಾಪಾಡಬೇಕಿದೆ.

ಸ್ಯಾನ್​ ಫ್ರಾನ್ಸಿಸ್ಕೋ ಟು ಬೆಂಗಳೂರು; 17 ಗಂಟೆಗಳ ನಾನ್​ಸ್ಟಾಪ್ ವಿಮಾನಯಾನದ ನೇತೃತ್ವ ವಹಿಸಿದ ಏರ್ ಇಂಡಿಯಾ ಮಹಿಳಾ ಪೈಲಟ್ ತಂಡ