ನಿವೃತ್ತಿಯಾದ ಒಂದೇ ತಿಂಗಳಲ್ಲಿ ಗುಂಡು ಹಾರಿಸಿಕೊಂಡು ASI ಆತ್ಮಹತ್ಯೆ

ಕೊಡಗು: ನಿವೃತ್ತಿಯಾದ ಒಂದೇ ತಿಂಗಳಲ್ಲಿ ASI ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿ‌ನ ಮಾದೇಗೋಡು ಗ್ರಾಮದಲ್ಲಿ ನಡೆದಿದೆ. ನಿವೃತ್ತ ASI ಎಂ.ಎಸ್‌.ಈರಪ್ಪ ಮೃತ ದುರ್ದೈವಿ.

ಮೇ 30 ರಂದು ನಿವೃತ್ತಿಯಾಗಿದ್ದ ಈರಪ್ಪ ಇಂದು ಮುಂಜಾನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಂಟಿ ನಳಿಕೆಯ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿವೃತ್ತಿಯಾಗುವ ಮುನ್ನ ಇವರು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Related Tags:

Related Posts :

Category:

error: Content is protected !!