ಮಹಿಳಾ ವಾರಿಯರ್​ಗೆ ನಿವೃತ್ತ IPS ಅಜಯ್ ಕುಮಾರ್ ಸಿಂಗ್‌ ಸನ್ಮಾನ

  • pruthvi Shankar
  • Published On - 14:22 PM, 21 Nov 2020

ಬೆಂಗಳೂರು: ಕೊರೊನಾ ಹಾವಳಿಯ ನಡುವೆಯೂ ಎದೆಗುಂದದೆ ಕಾರ್ಯನಿರ್ವಹಿಸಿದ್ದ ಕೋವಿಡ್​ ವಾರಿಯರ್​ಗೆ ನಿವೃತ್ತ ಐಪಿಎಸ್ ಅಧಿಕಾರಿ ಅಜಯ್ ಕುಮಾರ್ ಸಿಂಗ್ ಸನ್ಮಾನ ಮಾಡಿದ್ದಾರೆ.

ಕೋವಿಡ್ ಸಮಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಮಹಿಳಾ ಹೆಡ್ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡ್ತಿದ್ದ ಚೆನ್ನಮ್ಮ ಎಂಬುವವರಿಗೆ ನಿವೃತ್ತ ಐಪಿಎಸ್ ಅಧಿಕಾರಿ ಅಜಯ್ ಕುಮಾರ್ ಸಿಂಗ್ ಸನ್ಮಾನ ಮಾಡಿದರು.

ಸನ್ಮಾನದ ಜೊತೆಗೆ ಐದು ಸಾವಿರ ಕ್ಯಾಶ್ ರಿವಾರ್ಡ್ ನೀಡಿ ಮಹಿಳಾ ಹೆಡ್ ಕಾನ್ಸ್‌ಟೇಬಲ್ ಚೆನ್ನಮ್ಮ ಅವರ ಮನೋಬಲವನ್ನು ಹೆಚ್ಚಿಸಿದ್ದಾರೆ.