ಹೋಟೆಲ್​ನಲ್ಲಿ ರೈಸ್ ಸ್ಟೀಮ್ ಕುಕ್ಕರ್ ಸ್ಫೋಟಗೊಂಡು ನೌಕರನ ಸಾವು

  • Arun Belly
  • Published On - 22:14 PM, 28 Oct 2020

ಬೆಂಗಳೂರಿನ ರಿಚ್ಮಂಡ್ ವೃತ್ತದಲ್ಲಿರುವ ಹೋಟೆಲೊಂದರಲ್ಲಿ ರೈಸ್ ಸ್ಟೀಮ್ ಕುಕ್ಕರ್ ಆಕಸ್ಮಿಕವಾಗಿ ಸ್ಫೋಟಗೊಂಡಿದ್ದರಿಂದ ಒಬ್ಬ ನೌಕರ ಮೃತಪಟ್ಟಿದ್ದು ಮತ್ತೊಬ್ಬ ನೌಕರ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮೃತಪಟ್ಟಿರುವ ನೌಕರನನ್ನು ಅಸ್ಸಾಂ ಮೂಲದ ಮನೋಜ್ ಎಂದು ಗುರುತಿಸಲಾಗಿದ್ದು ಅವನು ಉದ್ಯೋಗ ಅರಿಸಿಕೊಂಡು ನಗರಕ್ಕೆ ಬಂದಿದ್ದನೆಂದು ತಿಳಿದುಬಂದಿದೆ.

ಗಾಯಗೊಂಡಿರುವ ನೌಕರನ ಹೆಸರು ಪ್ರದೀಪ್ ಆಗಿದ್ದು ಅವನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಅವನ ಸ್ಥಿತಿ ಚಿಂತಾಜನಕವಾಗಿದೆಯೆಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ.