CM -DCM ನಿವಾಸದ ಬಳಿ ನಿನ್ನೆ ಸಂಜೆ ಪುಂಡರ ಮಾರಾಮಾರಿ

ಬೆಂಗಳೂರು: ಕೊರೊನಾ ಮಹಾಮಾರಿಗೆ ನಗರಕ್ಕೆ ನಗರವೇ ನಲುಗಿ ಹೋಗಿದೆ. ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ನಗರದಲ್ಲಿ ಪುಂಡರ ಶೋಕಿ ಕೂಡ ಹೆಚ್ಚಾಗಿದೆ. ಇಷ್ಟು ದಿನ ಲಾಕ್​ಡೌನ್​ನಿಂದ ಮನೆಯಲ್ಲೇ ಖಾಲಿ ಕೂತಿದ್ದ ಪುಂಡರಿಗೆ ಇದೀಗ ಮತ್ತೇ ಹವಾ ಮೇಂಟೇನ್​ ಮಾಡೋ ಆಸೆ. ಹೀಗಾಗಿ ಚಿಲ್ಲರೆ ರಿವೇಂಜ್​ಗಳಿಗೆ ಮುಂದಾಗಿದ್ದಾರೆ.

ಇಂಥದ್ದೇ ಒಂದು ಘಟನೆ ನಗರದ ಡಾಲರ್ಸ್​ ಕಾಲೋನಿಯಲ್ಲಿ ನಿನ್ನೆ ಸಂಜೆ ನಡೆದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಡಿಸಿಎಂ ಅಶ್ವತ್ಥ್ ನಾರಾಯಣ ನಿವಾಸಗಳಿಂದ ಕೇವಲ 600 ಮೀಟರ್​ ದೂರದಲ್ಲೇ ಮಾರಾಕಾಸ್ತ್ರಗಳಿಂದ ಪುಂಡರ ಗುಂಪುಗಳೆರಡು ಪರಸ್ಪರ ಬಡಿದಾಡಿಕೊಂಡಿವೆ ಎಂದು ತಿಳಿದುಬಂದಿದೆ. ಒಬ್ಬರ ಮೇಲೆ ಒಬ್ಬರು ಹೊಡೆದಾಡಿಕೊಂಡಿರುವ ಪುಂಡರು ಯಾರು ಎಂಬುದು ತಿಳಿದುಬಂದಿಲ್ಲ.

Related Tags:

Related Posts :

Category:

error: Content is protected !!