ಹೋಂಡಾ ಆಕ್ಟಿವಾ ಡಿಕ್ಕಿಯಲ್ಲಿದ್ದ 300 ಗ್ರಾಂ ಚಿನ್ನ ಕದ್ದ ಖದೀಮರು

ರಾಮನಗರ: ಹೋಂಡಾ ಆಕ್ಟಿವಾದ ಡಿಕ್ಕಿಯಲ್ಲಿದ್ದ 300 ಗ್ರಾಂ ಚಿನ್ನವನ್ನ ಕಳ್ಳರು ಎಗರಿಸಿರುವ ಘಟನೆ ಜಿಲ್ಲೆಯ PWD ಕಚೇರಿಯ ಮುಂಭಾಗದಲ್ಲಿ ನಡೆದಿದೆ. ಜಿಲ್ಲೆಯ ಯರೇಹಳ್ಳಿ ಗ್ರಾಮದ ಮಹದೇವಯ್ಯ ಎಂಬುವವರಿಗೆ ಸೇರಿದ್ದ ಹೊಂಡಾ ಆಕ್ಟಿವಾದಿಂದ ಕಳ್ಳರು ಚಿನ್ನ ಕದ್ದೊಯ್ದಿದ್ದಾರೆ.
ಮಹದೇವಯ್ಯ ಲೋಕೋಪಯೋಗಿ ಇಲಾಖೆ ಕಚೇರಿ ಮುಂಭಾಗದಲ್ಲಿ ಬೈಕ್ ನಿಲ್ಲಿಸಿ ಕಚೇರಿ ಒಳಗೆ ಹೋಗಿದ್ದ ವೇಳೆ ಘಟನೆ ನಡೆದಿದೆ.

ಬ್ಯಾಂಕ್​ನಿಂದ ಚಿನ್ನವನ್ನ ಬಿಡಿಸಿಕೊಂಡು ತಮ್ಮ ವಾಹನದ ಡಿಕ್ಕಿಯಲ್ಲಿಟ್ಟು ಮಹದೇವಯ್ಯ ಕಚೇರಿಗೆ ಬಂದಿದ್ದರಂತೆ. ಆತನನ್ನು ಬ್ಯಾಂಕ್​ನಿಂದ ಫಾಲೋ ಮಾಡಿಕೊಂಡು ಬಂದ ಕಳ್ಳರು ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

Related Tags:

Related Posts :

Category:

error: Content is protected !!