ಮಚ್ಚು ತೋರಿಸಿ ದರೋಡೆ ಯತ್ನ, ದಿಟ್ಟ ಮಹಿಳೆ ಮಾಡಿದ್ದೇನು ಗೊತ್ತಾ?

ಚಿಕ್ಕಮಗಳೂರು: ಹಾಡುಹಗಲೇ ಮಚ್ಚು ತೋರಿಸಿ ಬಂಗಾರದ ಅಂಗಡಿಯಲ್ಲಿ ದರೋಡೆ ಮಾಡಿರುವ ಘಟನೆ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದ್ದು, ಮುಖಕ್ಕೆ ಮಾಸ್ಕ್ ಧರಿಸಿದ್ದ ವ್ಯಕ್ತಿ ಲಾಂಗ್ ತೋರಿಸಿ, ನಾಗಪ್ಪ ಶೇಟ್ ಎಂಬುವವರ ಬಂಗಾರದ ಅಂಗಡಿಗೆ ನುಗ್ಗಿದ್ದಾನೆ. ಈ ವೇಳೆ ಲಾಂಗ್ ನೋಡಿ ಬೆದರಿದ ಮಹಿಳಾ ಕೆಲಸಗಾರರು ಹೆದರಿದ್ದಾರೆ. ಅಲ್ಲೆ ಇದ್ದ ಮತ್ತೊಬ್ಬ ಮಹಿಳಾ ಕೆಲಸಗಾರ್ತಿ ಕುರ್ಚಿಯಿಂದ ದರೋಡೆಕೋರನ ಮೇಲೆ ಅಟ್ಯಾಕ್ ಮಾಡಿದ್ದಾರೆ.

ಮಹಿಳೆಯ ದಾಳಿಯಿಂದ ಹೆದರಿದ ದರೋಡೆಕೋರ 3 ಸರಗಳೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾನೆ. ಪರಾರಿಯಾಗುತ್ತಿದ್ದ ಖತರ್ನಾಕ್ ಕಳ್ಳನನ್ನು ಸ್ಥಳೀಯರು ಹಿಡಿಯಲು ಯತ್ನಿಸಿದರು ಸಹ, ಆತ ಅವರಿಂದ ತಪ್ಪಿಸಿಕೊಂಡು ಕಾಲ್ಕಿತ್ತಿದ್ದಾನೆ. ಸದ್ಯ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Related Tags:

Related Posts :

Category: