ಡ್ರಾಪ್ ಕೊಡೋ ನೆಪದಲ್ಲಿ ಸುಲಿಗೆ: ಟಿಕ್ಕಿ ಬಳಿ ಹಣ, ಚಿನ್ನ ಕಸಿದು ದರೋಡೆಕೋರರು ಎಸ್ಕೇಪ್

, ಡ್ರಾಪ್ ಕೊಡೋ ನೆಪದಲ್ಲಿ ಸುಲಿಗೆ: ಟಿಕ್ಕಿ ಬಳಿ ಹಣ, ಚಿನ್ನ ಕಸಿದು ದರೋಡೆಕೋರರು ಎಸ್ಕೇಪ್

ಮೈಸೂರು: ಬೆಂಗಳೂರಿಗೆ ಡ್ರಾಪ್ ಕೊಡುವ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದು ಟೆಕ್ಕಿಯ ಬಳಿ ಸುಲಿಗೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಟೆಕ್ಕಿ ಮಧುವಿಕಾಸ್​ಗೆ ಚಾಕು ತೋರಿಸಿ ಬೆದರಿಕೆ ಹಾಕಿ ಚಿನ್ನ ಕಸಿದುಕೊಂಡಿದ್ದಾರೆ. ನಂತರ ಬಲವಂತವಾಗಿ ಎಟಿಎಂನಿಂದ 40 ಸಾವಿರ ಹಣ ಡ್ರಾ ಮಾಡಿಸಿಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ.

ಡ್ರಾಪ್ ಕೊಡುವ ನೆಪದಲ್ಲಿ ದರೋಡೆ:
, ಡ್ರಾಪ್ ಕೊಡೋ ನೆಪದಲ್ಲಿ ಸುಲಿಗೆ: ಟಿಕ್ಕಿ ಬಳಿ ಹಣ, ಚಿನ್ನ ಕಸಿದು ದರೋಡೆಕೋರರು ಎಸ್ಕೇಪ್ಮೈಸೂರಿನ ಗೌರಿಶಂಕರ ನಗರದ ನಿವಾಸಿ ಮಧುವಿಕಾಸ್, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿಗೆ ತೆರಳಲು ನಗರದ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಶಿಫ್ಟ್ ಡಿಸೈರ್ ಕಾರಿನಲ್ಲಿ ಬಂದ ಮೂವರು ಬೆಂಗಳೂರಿಗೆ ಡ್ರಾಪ್ ಕೊಡುವ ಆಮಿಷ ತೋರಿಸಿದ್ದಾರೆ.

ಚಾಕು ತೋರಿಸಿ ಬೆದರಿಕೆ:
ಬೇಗ ಬೆಂಗಳೂರಿಗೆ ತಲುಪುವ ಉದ್ದೇಶದಿಂದ ಮಧುವಿಕಾಸ್ ಕಾರು ಹತ್ತಿದ್ದಾರೆ. ಕೊಲಂಬಿಯಾ ಏಷಿಯಾ ಬಳಿ ರಿಂಗ್ ರಸ್ತೆ ಮೂಲಕ ಕೆ.ಆರ್.ಎಸ್ ರಸ್ತೆ ಕಡೆಗೆ ತಿರುಗಿಸಿದ ದುಷ್ಕರ್ಮಿಗಳು, ಅಲ್ಲೇ ಕಾರು ನಿಲ್ಲಿಸಿ ಚಾಕು ತೋರಿಸಿ ಉಂಗುರ ಮತ್ತು ಸರವನ್ನು ಕಸಿದುಕೊಂಡಿದ್ದಾರೆ. ನಂತರ ಒಂಟಿಕೊಪ್ಪಲಿನ HDFC ಬ್ಯಾಂಕ್​ಗೆ ಸೇರಿದ ಎಟಿಎಂನಲ್ಲಿ 20 ಸಾವಿರ ಹಣ ಡ್ರಾ ಮಾಡಿ, ಬಳಿಕ ಅಶೋಕ‌ ರಸ್ತೆಯಲ್ಲಿರುವ ಕೊಟಾಕ್ ಮಹೀಂದ್ರ ಎಟಿಎಂನಲ್ಲಿ 20 ಸಾವಿರ ಹಣ ಡ್ರಾ ಮಾಡಿಸಿ‌ಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

, ಡ್ರಾಪ್ ಕೊಡೋ ನೆಪದಲ್ಲಿ ಸುಲಿಗೆ: ಟಿಕ್ಕಿ ಬಳಿ ಹಣ, ಚಿನ್ನ ಕಸಿದು ದರೋಡೆಕೋರರು ಎಸ್ಕೇಪ್

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!