ಒಂದೇ ತಿಂಗಳಲ್ಲಿ ಮೈಸೂರು DC ವರ್ಗಾವಣೆ: ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ

ಮೈಸೂರು: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕಗೊಂಡಿದ್ದಾರೆ. ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿಯವರನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

ಪ್ರಸ್ತುತ ಜಿಲ್ಲಾಧಿಕಾರಿ ಬಿ.ಶರತ್​ಗೆ ಸ್ಥಳ ತೋರಿಸದೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಒಂದು ತಿಂಗಳ ಹಿಂದಷ್ಟೇ ಮೈಸೂರು DC ಆಗಿ ಬಿ.ಶರತ್​ರನ್ನ ನೇಮಕ ಮಾಡಲಾಗಿತ್ತು. ಬಿ.ಶರತ್ ಕಲಬುರಗಿಯಿಂದ ಮೈಸೂರಿಗೆ ವರ್ಗಾವಣೆಯಾಗಿದ್ದರು.

ವರ್ಗಾವಣೆ ಹಿಂದೆ ಇದ್ಯಾ ಒತ್ತಡ?
ಕೇವಲ ಒಂದು ತಿಂಗಳಲ್ಲೇ ಮೈಸೂರು ಡಿಸಿ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ರೋಹಿಣಿ ಸಿಂಧೂರಿ ದೊಡ್ಡಮಟ್ಟದ ಒತ್ತಡ ಹಾಕಿದ್ರಾ ಎಂಬ ಮಾತು ಕೇಳಬಂದಿದೆ. ಖುದ್ದು ಸಿಎಂ BSYರಿಂದ ಜಿಲ್ಲಾಧಿಕಾರಿ ಶರತ್‌ಗೆ ದೂರವಾಣಿ ಕರೆ ಮಾಡಲಾಗಿದ್ದು ಸೂಕ್ತ ಸ್ಥಳ ನೀಡ್ತೇವೆ. ಕಾನೂನು ತೊಡಕು ಮಾಡಿಕೊಳ್ಳಬೇಡಿ ಎಂದು ಯಡಿಯೂರಪ್ಪನವರು ಮನವರಿಕೆ ಮಾಡಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಮೈಸೂರು DC ಆಗಿ ತಮ್ಮನ್ನು ನೇಮಿಸಬೇಕೆಂದು ರೋಹಿಣಿ ಸಿಂಧೂರಿ ಸಿಎಂ ಮೇಲೆ ಒತ್ತಡ ಹೇರಿದ್ದು ಇದಕ್ಕೆ ಮಣಿದು ಶರತ್‌ ವರ್ಗಾವಣೆಯಾಗಿರುವ ಸಾಧ್ಯತೆಯಿದೆ ಎಂಬ ಮಾತು ಕೇಳಿಬಂದಿದೆ.

Related Tags:

Related Posts :

Category:

error: Content is protected !!