ಈ ಬಾರಿಯೂ ರೋಹಿತ್ ದೊಡ್ಡ ಸಾಧನೆಗಳನ್ನು ಮಾಡಲಿದ್ದಾರೆ: ಬ್ರೆಟ್ ಲೀ

ವಿಶ್ವದ ಪ್ರಸ್ತುತ ಬ್ಯಾಟ್ಸ್​ಮನ್​ಗಳಲ್ಲಿ ಅತ್ಯಂತ ಅಪಾಯಕಾರಿ ಯಾರು ಅಂತ ನಿಮ್ಮನ್ನು ಕೇಳಿದರೆ ಯಾರ ಹೆಸರು ಹೇಳುತ್ತೀರಿ? ಅಥವಾ ಈ ಬಾರಿಯ ಇಂಡಿಯನ್ನ ಪ್ರಿಮೀಯರ್ ಲೀಗ್​ನಲ್ಲಿ ಆಡುತ್ತಿರುವ ಬ್ಯಾಟ್ಸ್​ಮನ್​ಗಳ ಪಯಕೆ ಯಾರು ಹೆಚ್ಚು ವಿಧ್ವಂಸಕಕಾರಿ ಅಂತ ಕೇಳಿದರೆ?

ನಿಸ್ಸಂದೇಹವಾಗಿ ಬಹಳಷ್ಟು ಜನ ಕೊಲ್ಕತಾ ನೈಟ್ ರೈಡರ್ಸ್​ನ ಆಂದ್ರೆ ರಸ್ಸೆಲ್ ಅಥವಾ ಅವರ ನಾಡಿನವರೇ ಆಗಿರುವ ಕ್ರಿಸ್ ಗೇಲ್ ಹೆಸರು ಹೇಳುತ್ತಾರೆ. ಇನ್ನೂ ಹಲವಾರು ಸ್ಫೋಟಕ ಬ್ಯಾಟ್ಸ್​ಮನ್​ಗಳು ಐಪಿಎಲ್​ನಲ್ಲಿ ಆಡುತ್ತಿದ್ದಾರೆ. ಸರಿ, ಇದೇ ಪ್ರಶ್ನೆಯನ್ನು ಮಾಜಿ ವೇಗದ ಬೌಲರ್ ಮತ್ತು ಈಗ ಕಾಮೆಂಟೇಟರ್ ಮತ್ತು ಅನಾಲಿಸ್ಟ್ ಆಗಿ ಟಿವಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಆಸ್ಟ್ರೇಲಿಯಾದ ಬ್ರೆಟ್ ಲೀ ಅವರಿಗೆ ಕೇಳಿದಾಗ ಅವರು ಯಾರ ಹೆಸರು ಹೇಳಿದರು ಗೊತ್ತಾ? ಮುಂಬೈ ಇಂಡಿಯನ್ಸ್ ಟೀಮಿನ ಕ್ಯಾಪ್ಟನ್ ರೋಹಿತ್ ಶರ್ಮ!

‘‘ರೋಹಿತ್ ಶರ್ಮ ಅವರ ಮೇಲಿರುವ ಪ್ರಮುಖ ಹೊಣೆಗಾರಿಕೆಗಳೆಂದರೆ ಮುಂಬೈ ಇಂಡಿಯನ್ಸ್ ತಂಡಕ್ಕೆ ರನ್ ಗಳಿಸುವುದು ಮತ್ತು ವೈಯಕ್ತಿಕ ಪ್ರದರ್ಶನಗಳಿಂದ ಇತರ ಆಟಗಾರರಲ್ಲಿ ಚೈತನ್ಯ, ಪ್ರೇರಣೆ ತುಂಬುತ್ತಾ ತಂಡವನ್ನು ಮುನ್ನೆಡೆಸುವುದು. ರೋಹಿತ್ ಅಷ್ಟು ಮಾಡಿದರೆ ಸಾಕು, ಮಿಕ್ಕಿದ್ದನ್ನು ಉಳಿದ ಆಟಗಾರರು ನೋಡಿಕೊಳ್ಳುತ್ತಾರೆ,’’ ಎಂದಿರುವ ಲೀ, ‘‘ಈ ಬಾರಿ ರೋಹಿತ್ ಅವರಿಂದ ದೊಡ್ಡ ಸಾಧನೆಗಳನ್ನು ನಾನು ನಿರೀಕ್ಷಿಸುತ್ತಿದ್ದೇನೆ,’’ ಅಂತ ಹೇಳಿದ್ದಾರೆ.

ಅಂದಹಾಗೆ, ಐಪಿಎಲ್​ನಲ್ಲಿ ಅತೆ ಹೆಚ್ಚು ರನ್ ಗಳಿಸಿರುವವರ ಪೈಕಿ ರೋಹಿತ್ ಮೂರನೇ ಸ್ಥಾನದಲ್ಲಿದ್ದಾರೆ. ಇದುವರೆಗೆ 188 ಪಂದ್ಯಗಳನ್ನು ಅವರು ಆಡಿದ್ದು 31.60 ಸರಾಸರಿ ಮತ್ತು 130.82 ಸ್ಟ್ರ್ಯೆಕ್​ರೇಟ್​ನೊಂದಿಗೆ 4,898 ರನ್ ಕಲೆಹಾಕಿದ್ದಾರೆ. ಅವರು ಬಾರಿಸಿರುವ ಸಿಕ್ಸರ್​ಗಳ ಸಂಖ್ಯೆ 194, ಭಾರತೀಯ ಆಟಗಾರರ ಪೈಕಿ ಎರಡನೇ ಅತ್ಯಧಿಕ.

ನಾಯಕನಾಗಿಯೂ ರೋಹಿತ್ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದು ಅತ್ಯಂತ ಯಶಸ್ವೀ ನಾಯಕನೆನಿಸಿಕೊಂಡಿದ್ದಾರೆ. ಎಂದಿನಂತೆ ಈ ಬಾರಿಯೂ ತಾವೇ ಇನ್ನಿಂಗ್ಸ್ ಆರಂಭಿಸುವುದನ್ನು ಅವರು ಖಚಿತಪಡಿಸಿದ್ದಾರೆ.

Related Tags:

Related Posts :

Category: