ಬಂಟ್ವಾಳ: ತಲವಾರ್​​ನಿಂದ ಕೊಚ್ಚಿ ಕೊಚ್ಚಿ ರೌಡಿಶೀಟರ್​​​ ಬರ್ಬರ ಹತ್ಯೆ

  • KUSHAL V
  • Published On - 18:42 PM, 23 Oct 2020

ದಕ್ಷಿಣ ಕನ್ನಡ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಒಬ್ಬನನ್ನು​ ಬರ್ಬರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಬಂಟ್ವಾಳ ಸಮೀಪದ ಬೋಗೋಡಿ ಬಳಿ ನಡೆದಿದೆ. ಕಲ್ಲಡ್ಕ ನಿವಾಸಿ ಚೆನ್ನೆ ಫಾರೂಕ್ ಕೊಲೆಯಾದ ರೌಡಿಶೀಟರ್ ಎಂದು ತಿಳದುಬಂದಿದೆ.

ಕಾರಿನಲ್ಲಿ ಬಂದ ದುಷ್ಕರ್ಮಿಗಳು ತಲವಾರ್​ನಿಂದ ಫಾರೂಕ್​ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ. ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚೆನ್ನೆ ಫಾರೂಕ್​ನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.