ಪ್ಲಾನ್ ಸಕ್ಸಸ್: ಅಂದು ‘ಮುನಿ’ದ ಮಹಿಳಾಮಣಿಗಳು ಇಂದು BJPಗೆ ಸೇರ್ಪಡೆ

ಬೆಂಗಳೂರು: ನವೆಂಬರ್ 3ರಂದು R.R.ನಗರ ಕ್ಷೇತ್ರಕ್ಕೆ ಉಪಚುನಾವಣೆ ಹಿನ್ನೆಲೆಯಲ್ಲಿ ಒಕ್ಕಲಿಗ ಮತಗಳನ್ನ ಸೆಳೆಯಲು ತೆರೆಮರೆಯಲ್ಲಿ ಕಸರತ್ತು ನಡೆದಿದೆ. ಸಚಿವ ಆರ್.ಅಶೋಕ್ ಮುಖಾಂತರ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಕ್ಷೇತ್ರದ ಒಕ್ಕಲಿಗ ಮುಖಂಡರನ್ನು ಭೇಟಿಯಾಗಿ ಒಕ್ಕಲಿಗ ಸಮುದಾಯದ ಬಿಬಿಎಂಪಿ ಮಾಜಿ ಸದಸ್ಯರು ಮತ್ತು ಒಕ್ಕಲಿಗ ಮುಖಂಡರನ್ನು ಬಿಜೆಪಿಗೆ ಸೇರಿಸಲು ಪ್ಲ್ಯಾನ್ ಮಾಡಿದ್ದರು.

ಅದರಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು, ಸಚಿವ ಆರ್.ಅಶೋಕ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು R.R.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಸಮ್ಮುಖದಲ್ಲಿ R.R.ನಗರ ಜೆಡಿಎಸ್, ಕಾಂಗ್ರೆಸ್ ಮುಖಂಡರು BJPಗೆ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್‌ನ ಬಿಬಿಎಂಪಿ ಮಾಜಿ ಸದಸ್ಯ ಶ್ರೀನಿವಾಸಮೂರ್ತಿ, ಜಾಲಹಳ್ಳಿ ವಾರ್ಡ್ BBMP ಮಾಜಿ ಸದಸ್ಯ ನಾರಾಯಣಸ್ವಾಮಿ, ಯಶವಂತಪುರ ಬಿಬಿಎಂಪಿ ಮಾಜಿ ಸದಸ್ಯ ಜಿ.ಕೆ.ವೆಂಕಟೇಶ್, ಹೆಚ್ಎಂಟಿ ವಾರ್ಡ್ BBMP ಮಾಜಿ ಸದಸ್ಯೆ ಆಶಾ ಸುರೇಶ್, ವೇಲು ನಾಯ್ಕರ್, ಕೊಟ್ಟಿಗೆಪಾಳ್ಯ ಮೋಹನ್ ಕುಮಾರ್, ಲಗ್ಗೆರೆ ಮಾಜಿ ಬಿಬಿಎಂಪಿ ಸದಸ್ಯ ಸಿದ್ದೇಗೌಡ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಮುನಿರತ್ನ ವಿರುದ್ಧ ಸಿಡಿದು ನಿಂತವರೇ ಮುನಿರತ್ನ ಪಕ್ಷಕ್ಕೆ:
ಅಂದು ಮುನಿರತ್ನ ವಿರುದ್ಧ ಬಿಬಿಎಂಪಿಯಲ್ಲಿ ಸಮರ ಸಾರಿದ್ದ ಮಹಿಳಾ ಕಾರ್ಪೋರೇಟರ್​ಗಳೇ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. 2017ರಲ್ಲಿ ಮುನಿರತ್ನ ದುಶ್ಯಾಸನಂತೆ ಮಹಿಳಾ ಕಾರ್ಪೊರೇಟರ್ ಸೀರೆ ಎಳೆದಿದ್ದರು. ಹೀಗಾಗಿ ಬಿಬಿಎಂಪಿಯಲ್ಲಿ ಆಶಾ ಸುರೇಶ್, ಮಮತಾ ವಾಸುದೇವ್, ಮಂಜುಳಾ ನಾರಾಯಣಸ್ವಾಮಿ ಅವರು ಮುನಿರತ್ನ ವಿರುಧ್ಧ ಸತತ ಪ್ರತಿಭಟನೆ ನಡೆಸಿದ್ದರು. ಆದರೆ ಈಗ ಆಶಾ ಸುರೇಶ್, ಮಂಜುಳಾ ನಾರಾಯಣಸ್ವಾಮಿ ಮುನಿರತ್ನ ಪಕ್ಷ ಸೇರಿಕೊಂಡಿದ್ದಾರೆ.

Related Tags:

Related Posts :

Category:

error: Content is protected !!