ದರ್ಶನ್ ಬರ್ತ್​ಡೆ: ಅಭಿಮಾನಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

ಬೆಂಗಳೂರು: ನಟ ದರ್ಶನ್ ಅಭಿಮಾನಿಗಳ ವಿರುದ್ಧ ಸಾರ್ವಜನಿಕರು ದೂರು ನೀಡಿದ್ದಾರೆ. ನಿನ್ನೆ ನಟ ದರ್ಶನ್ ಹುಟ್ಟುಹಬ್ಬ ಹಿನ್ನೆಲೆ ಮಧ್ಯರಾತ್ರಿ ದರ್ಶನ್ ಮನೆಯಲ್ಲಿ ಹುಟ್ಟುಹಬ್ಬದ ಆಚರಣೆಯಿಂದ ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿ ಉಂಟಾಗಿದೆ. ದರ್ಶನ್ ಅಭಿಮಾನಿಗಳು ಅಕ್ಕ ಪಕ್ಕದ ಮನೆಗಳ ಕಾಂಪೌಂಡ್ ಹತ್ತಿ ನಿಂತು ಜೈಕಾರ ಕೂಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಕೆಲ‌ ಅಭಿಮಾನಿಗಳು ಕಾರ್ ಗಳನ್ನ ಹತ್ತಿ ಜೈಕಾರ ಕೂಗಿದ್ದಾರೆ ಇದರಿಂದ ಕಾರ್​ಗಳಿಗೆ ಡ್ಯಾಮೇಜ್ ಆಗಿದೆ ಎಂದು ಸ್ಥಳೀಯರು ದರ್ಶನ್ ಅಭಿಮಾನಿಗಳ ವಿರುದ್ಧ ಆರೋಪಿಸಿದ್ದಾರೆ. ಪೊಲೀಸರಿಗೆ ಹೇಳಿದ್ರೆ ‘ವರ್ಷಕ್ಕೆ ಒಂದು ದಿನ ಅಡ್ಜೆಸ್ಟ್ ಮಾಡಿಕೊಳ್ಳುವಂತೆ ಉತ್ತರ ನೀಡ್ತಾರೆ ಎಂದು ಸ್ಥಳೀಯರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಮಪ್ರಸಾದ್ ಎಂಬುವವರಿಂದ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ ಅಭಿಮಾನಿಗಳ ವಿರುದ್ಧ ದೂರು ನೀಡಿದ್ದಾರೆ.

Related Posts :

Category:

error: Content is protected !!