ಬಿಡಿಎನಲ್ಲಿ ಪ್ರಗತಿಗಿಂತ ಭ್ರಷ್ಟಾಚಾರವೇ ಹೆಚ್ಚು ಸದ್ದು ಮಾಡ್ತಿದೆ: BDA ನೂತನ ಅಧ್ಯಕ್ಷ S R ವಿಶ್ವನಾಥ್

ನನ್ನ ಸಾಮರ್ಥ್ಯ ಗುರುತಿಸಿ ಮುಖ್ಯಮಂತ್ರಿಗಳು ಈ ಜವಾಬ್ದಾರಿ ಕೊಟ್ಟಿದ್ದಾರೆ. ಒಂದು ವರ್ಷದಲ್ಲಿ ಬಿಡಿಎ ಅಕೌಂಟ್​ನಲ್ಲಿ ಎರಡು ಮೂರು ಸಾವಿರ ಕೋಟಿ ಇರುವಂತೆ ಮಾಡ್ತೀನಿ.

  • pruthvi Shankar
  • Published On - 15:12 PM, 26 Nov 2020
BDA ಅಧ್ಯಕ್ಷ S R ವಿಶ್ವನಾಥ್ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಒಂದು ಕಾಲದಲ್ಲಿ ವೈಭವದಿಂದ ಕೂಡಿದ್ದ ಸಂಸ್ಥೆ ಈಗ ಕಳೆಗುಂದಿದೆ ಎಂದು ಬಿಡಿಎ ನೂತನ ಅಧ್ಯಕ್ಷ ಎಸ್​.ಆರ್.ವಿಶ್ವನಾಥ್ ಹೇಳಿದರು.

ಬಿಡಿಎ ಕೇಂದ್ರ ಕಚೇರಿಯಲ್ಲಿ ಬಿಡಿಎ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿ, ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ಬಿಡಿಎ ಯಲ್ಲಿ ಪ್ರಗತಿಗಿಂತ ಭ್ರಷ್ಟಾಚಾರವೇ ಹೆಚ್ಚು ಸದ್ದುಮಾಡ್ತಿದೆ. ಯಾವುದೇ ಅಧಿಕಾರಿಗಳ ಮುಲಾಜು ನಾನು ನೋಡುವುದಿಲ್ಲ. ನಾನು ಬೇರೆಯದ್ದೇ ಆದ ರೀತಿಯಲ್ಲಿ ಕೆಲಸ ಮಾಡ್ತೀನಿ. ನಾಳೆ ಆಗೋ ಕೆಲ್ಸ ಇಂದೇ ಆಗ್ಬೇಕು ಅನ್ನೋದು ನನ್ನ ಉದ್ದೇಶ ಎಂದು ನುಡಿದರು.

ನನ್ನ ಸಾಮರ್ಥ್ಯ ಗುರುತಿಸಿ ಮುಖ್ಯಮಂತ್ರಿಗಳು ಈ ಜವಾಬ್ದಾರಿ ಕೊಟ್ಟಿದ್ದಾರೆ. ಒಂದು ವರ್ಷದಲ್ಲಿ ಬಿಡಿಎ ಅಕೌಂಟ್​ನಲ್ಲಿ ಎರಡು ಮೂರು ಸಾವಿರ ಕೋಟಿ ಇರುವಂತೆ ಮಾಡ್ತೀನಿ. ಹಂಚಿಕೆ ಬಾಕಿ ಇರುವ ನಿವೇಶನಗಳನ್ನು ಇತ್ಯರ್ಥ ಪಡಿಸ್ತೀನಿ ಎಂದರು.

ಪೆರಿಫೆರಲ್ ರಸ್ತೆ ನಮ್ಮ ಮುಂದಿನ ಟಾರ್ಗೆಟ್. ನಿರೀಕ್ಷೆ ಮೀರಿ ಕೆಲ್ಸ ಮಾಡ್ತೀನಿ, ಬಿಡಿಎ ಅಂದ್ರೇನು ಅಂತ ತೋರಿಸ್ತೀನಿ. ಜನಸಾಮಾನ್ಯರಿಗೆ ತೊಂದರೆಕೊಡೋ ಅಧಿಕಾರಿಗಳನ್ನ ಕ್ಷಣಕಾಲವೂ ಇಲ್ಲಿ ಬಿಡೋದಿಲ್ಲ. ಫ್ರೀ ಹ್ಯಾಂಡ್ ಬಿಡಿ ಎಂದು ಈಗಾಗಲೇ ಸಿಎಂಗೆ ನಾನು ಮಾಡಿಕೊಂಡಿದ್ದೇನೆ ಎಂದು ಹೇಳಿದರು.

ವಿಶ್ವನಾಥ್ ಅವರಿಗೆ ಶಾಸಕರಾದ ಬೈರತಿ ಬಸವರಾಜ್, ಮುನಿರತ್ನ ಶುಭ ಕೋರಿದ್ದಾರೆ.