ಲೆಗ್ ಸ್ಪಿನ್ನರ್ ಅಬ್ದುಲ್ ಖಾದಿರ್ ನಿಧನಕ್ಕೆ ಸಚಿನ್ ಸಂತಾಪ

ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್, ದಿಗ್ಗಜ ಕ್ರಿಕೆಟಿಗ ಅಬ್ದುಲ್ ಖಾದಿರ್​ ಹೃದಯಾಘಾತದಿಂದ ಶುಕ್ರವಾರ ಲಾಹೋರ್​ನಲ್ಲಿ ಮೃತಪಟ್ಟಿದ್ದಾರೆ. ಅಬ್ದುಲ್​ ಖಾದಿರ್​​ಗೆ 63 ವರ್ಷ ವಯಸ್ಸಾಗಿತ್ತು.

 16 ವರ್ಷದವರಿದ್ದಾಗ ಸಚಿನ್, ಪಾಕ್​ನ ಅಬ್ದುಲ್ ಖಾದಿರ್ ಅವರ ಬೌಲಿಂಗ್​ ಎದುರಿಸಿದ್ದರು. ಖಾದಿರ್​​ ಒಬ್ಬ ಉತ್ತಮ ಸ್ಪಿನ್ನರ್​ ಆಗಿದ್ದರು ಎಂದು ಸಚಿನ್ ತೆಂಡುಲ್ಕರ್ ಅಬ್ದುಲ್​ ವಿರುದ್ಧ ಆಡಿದ ದಿನಗಳನ್ನ ನೆನೆದು ಕಂಬನಿ ಮಿಡಿದಿದ್ದಾರೆ. ಅವರ ಕುಟುಂಬಕ್ಕೆ ಸಚಿನ್ ಸಂತಾಪ ತಿಳಿಸಿ, ಖಾದಿರ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

ಪಾಕಿಸ್ತಾನದ ಪರ 67 ಟೆಸ್ಟ್​ ಹಾಗು 104 ಏಕದಿನ ಪಂದ್ಯಗಳನ್ನು ಆಡಿದ್ದ ಅಬ್ದುಲ್, ಒಟ್ಟು 368 ವಿಕೆಟ್​ಗಳನ್ನು ಪಡೆದಿದ್ದರು. ಅಲ್ಲದೆ 1979ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಭಾರತ ಮತ್ತು ಪಾಕ್ ನಡುವಿನ ಟೆಸ್ಟ್‌ನಲ್ಲಿ ಖಾದಿರ್ ಆಡಿದ್ದರು. ಮಾಜಿ ಕ್ರಿಕೆಟ್ ಆಟಗಾರನ ನಿಧನಕ್ಕೆ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more