ಸಚಿನ್ DRS ವಿರೋಧಿ, ಯಾಕೆ ಗೊತ್ತಾ?

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾರ್ಡನ್ ಕ್ರಿಕೆಟ್​ನ ಎಲ್ಲಾ ತಂತ್ರಜ್ಞಾನವನ್ನೂ ಸ್ವಾಗತಿಸಿದ ಕ್ರಿಕೆಟಿಗ. ಆದ್ರೆ DRS ವಿಚಾರದಲ್ಲಿ ಸಚಿನ್ ಅದೇಕೋ ಮೊದಲಿನಿಂದಲೂ ಅಸಮಾಧಾನ ಹೊಂದಿದ್ರು. ಆದರೆ ಈಗ ಸಚಿನ್ ತಾವ್ಯಾಕೆ DRS ಸಿಸ್ಟಮ್​ನ ವಿರೋಧಿಸ್ತಾರೆ ಅನ್ನೋ ಸಂಗತಿಯನ್ನ ಬಾಯಿಬಿಟ್ಟಿದ್ದಾರೆ.

DRSಗೆ ಸಂಬಂಧಿಸಿದಂತೆ ವೆಸ್ಟ್ ಇಂಡೀಸ್‌ನ ದಿಗ್ಗಜ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಜೊತೆ ನಡೆಸಿರುವ ಸಂಭಾಷಣೆಯ ವಿಡಿಯೋವನ್ನು ಸಚಿನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಚಿನ್ DRS ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ.

ಚೆಂಡು ಯಾವ ಶೇಕಡಾ ಆಧಾರದಲ್ಲಿ ಸ್ಟಂಪ್​ಗೆ ಬಡಿಯಿತು ಅನ್ನೋದು ಮುಖ್ಯವಲ್ಲ. DRS​ನಲ್ಲಿ ಬಾಲ್ ಸ್ಟಂಪ್​ಗೆ ಬಡಿದಿದ್ದು ಕಂಡುಬಂದರೆ ಆನ್ ಫೀಲ್ಡ್ ಅಂಪೈರ್ DRS ತೆಗೆದುಕೊಳ್ಳದೆ ಬ್ಯಾಟ್ಸ್​ಮನ್ ಔಟ್ ಆಗಿದ್ದಾನೆ ಎಂದು ತೀರ್ಪು ನೀಡಬೇಕು. DRS​ನಲ್ಲಿ ಈ ಬದಲಾವಣೆಯನ್ನು ತಂದರೆ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿದಂತಾಗುತ್ತದೆ. ಮನುಷ್ಯರಂತೆ ತಂತ್ರಜ್ಞಾನವೂ ಯಾವಾಗಲೂ ಕರೆಕ್ಟ್​​​ ಆಗಿರಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ. ಈ ಪರಿಕಲ್ಪನೆ ದೋಷಪೂರಿತವಾಗಿದೆ ಎಂದಿದ್ದಾರೆ. ICCಯೊಂದಿಗೆ ನಾನು ಒಪ್ಪದ ವಿಷಯದಲ್ಲಿ ಅದೂ ಇದೆ ಎಂದು ಬ್ರಿಯಾನ್ ಲಾರಾ ಬಳಿ ಸಚಿನ್ ತೆಂಡೂಲ್ಕರ್ ಹಂಚಿಕೊಂಡಿದ್ದಾರೆ.

ಈ DRS ಅಂದ್ರೆ ಏನು?
DRS ಅಂದ್ರೆ ಡಿಸೀಷನ್ ರಿವ್ಯೂ ಸಿಸ್ಟಮ್. ಬ್ಯಾಟ್ಸ್​ಮನ್​ ಔಟ್​ ಆಗಿದ್ದಾನೋ ಅನ್ನೋ ಅನುಮಾನವನ್ನ ಪರಿಹರಿಸಿಕೊಳ್ಳೋದಕ್ಕೆ ಈ ತಂತ್ರಜ್ಞಾನವನ್ನ ಬಳಸಿಕೊಳ್ಳಲಾಗುತ್ತೆ. LBW ಸಮಯದಲ್ಲಿ ಬಾಲ್ ಶೇಕಡಾ 50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸ್ಟಂಪ್​ಗೆ ಬಡಿದಿದ್ರೆ, ಆಗ ಡಿಸೀಷನ್ ರಿವ್ಯೂ ಸಿಸ್ಟಮ್ ಅನ್ನ ಬಳಸಿಕೊಳ್ಳಲಾಗುತ್ತೆ. ಆದ್ರೆ ಇದರಿಂದ ಅನರ್ಥಗಳಾಗೋದೇ ಹೆಚ್ಚು ಅನ್ನೋದು ಸಚಿನ್ ವಾದ. ಸಚಿನ್ ಹೇಳಿರೋದ್ರಲ್ಲಿ ತಪ್ಪೇನು ಇಲ್ಲ. ಆಗಾಗ DRSಬಳಸಿ ಉಂಟಾಗೋ ಲೋಪಗಳಿಂದ ಮ್ಯಾಚ್​​ಗಳಲ್ಲಿ ವಿವಾದಗಳು ಆಗ್ತಾನೇ ಇರುತ್ತೆ.

Related Tags:

Related Posts :

Category:

error: Content is protected !!