ನಟಿ ಶುಭಾ ಪೂಂಜಾಗೆ ಕೂಡಿಬಂತು ಕಂಕಣ ಭಾಗ್ಯ!

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಶುಭಾ ಪೂಂಜಾಗೆ ಕಂಕಣ ಭಾಗ್ಯ ಕೂಡಿಬಂದಿದೆ. ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗನೊಟ್ಟಿಗೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇದೇ ವರ್ಷ ಮದುವೆಗೆ ಸಿದ್ಧತೆ ಮಾಡಿಕೊಂಡಿರೋ ಶುಭಾ, ಕುಟುಂಬಸ್ಥರ ಆಶೀರ್ವಾದದೊಂದಿಗೆ ತಮ್ಮ ನೆಚ್ಚಿನ ಹುಡುಗನನ್ನ ವರಿಸಲಿದ್ದಾರೆ.

ಅಂದಹಾಗೆ ಹುಡುಗ ಯಾರು ಗೊತ್ತಾ?
ಹೌದು, ನಮ್ಮ ‘ಮೊಗ್ಗಿನ ಮನಸ್ಸಿನ’ ನಟಿಯ ಮನಗೆದ್ದ ಆ ‘ಕಂಠೀರವ’ ಯಾರು ಗೊತ್ತಾ? ಸುಮಂತ್ ಮಹಾಬಲ. ಮಂಗಳೂರು ಮೂಲದ ಬ್ಯುಸಿನೆಸ್​ಮನ್​​ ಆಗಿರುವ ಸುಮಂತ್​ ಜಯಕರ್ನಾಟಕ ಸಂಘದ ಬೆಂಗಳೂರು ದಕ್ಷಿಣ ವಿಂಗ್​ಗೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

Related Tags:

Related Posts :

Category:

error: Content is protected !!