ಸಂಕ್ರಾಂತಿ ಫಲಾಫಲ ದ್ವಾದಶ ರಾಶಿ ಭವಿಷ್ಯ: ಡಾ.ಬಸವರಾಜ್ ಗುರೂಜಿ

ಜಗದ ಚಕ್ಷುವಾದ ಸೂರ್ಯ ಭಗವಾನ್ ಮಕರ ರಾಶಿಗೆ ಪ್ರವೇಶಿಸುವ ಪರ್ವ ಕಾಲವಿದು. ಸೂರ್ಯನಾರಾಯಣನು ಏಳು ಕುದುರೆ ಏರಿ ಉತ್ತರಾಯಣದಲ್ಲಿ ಪ್ರಯಾಣ ಮಾಡುವ ಕಾಲ. ಉತ್ತರಾಯಣದಲ್ಲಿ, ಜಗದ ಒಳಿತಿಗೆ, ಉನ್ನತಿಗೆ ಆಶಿಸೋಣ.

  • ಡಾ.ಬಸವರಾಜ ಗುರೂಜಿ
  • Published On - 10:48 AM, 13 Jan 2021
ಡಾ.ಬಸವರಾಜ ಗುರೂಜಿ

ಜಗದ ಚಕ್ಷುವಾದ ಸೂರ್ಯ ಭಗವಾನ್ ಮಕರ ರಾಶಿಗೆ ಪ್ರವೇಶಿಸುವ ಪರ್ವ ಕಾಲವಿದು. ಸೂರ್ಯನಾರಾಯಣನು ಏಳು ಕುದುರೆ ಏರಿ ಉತ್ತರಾಯಣದಲ್ಲಿ ಪ್ರಯಾಣ ಮಾಡುವ ಕಾಲ. ಉತ್ತರಾಯಣದಲ್ಲಿ, ಜಗದ ಒಳಿತಿಗೆ, ಉನ್ನತಿಗೆ ಆಶಿಸೋಣ.

ಮೇಷ: ನಾಯಕ ಗುಣ ಇರುವಂಥವರಿಗೆ ಶುಭಫಲ ಸಿಗಲಿದೆ. ಆರೋಗ್ಯ ವೃದ್ಧಿಯಾಗಲಿದೆ. ಹೊಸತನ್ನು ಮಾಡಲು ಹಂಬಲಿಸುವವರಿಗೆ ಇದು ಶುಭಕಾಲ. ಉದ್ಯೋಗದಲ್ಲಿ ಭಡ್ತಿ ಸಿಗುವ ಸಾಧ್ಯತೆ. ಅಪವಾದ ಬರಬಹುದು, ಹಾಗಾಗಿ, ಜಾಗೃತರಾಗಿರುವುದು ಒಳ್ಳೆಯದು. ಪ್ರಯಾಣ ಅವಕಾಶ ಲಭಿಸಲಿದೆ. ಶುಭಸುದ್ಧಿ ಕೇಳುವಿರಿ. ವ್ಯಾಪಾರಿ/ಬೀದಿ ವ್ಯಾಪಾರಿ, ಐಟಿಬಿಟಿ ವಿಭಾಗದ ಕೆಲಸಗಾರರಿಗೆ ಶುಭವಾಗಲಿದೆ. ಮಾತಿನ ವಿಚಾರದಲ್ಲಿ ಜಾಗೃತರಾಗಿರಬೇಕು. ದುರ್ಗಾ ಸೂಕ್ತ ಪಾರಾಯಣ ಮಾಡಿರಿ. ವೃದ್ಧರಿಗೆ ಸಹಾಯ ಮಾಡಿ. ಬಿಳಿ, ಕೆಂಪು ಶುಭ ಬಣ್ಣ. ಹವಳ ಧರಿಸಿದರೆ ಒಳ್ಳೆಯದು. ಶಿವಸ್ತುತಿ ಮಾಡಿದರೆ ಒಳಿತಾಗಲಿದೆ. ಶುಭಸಂಖ್ಯೆ 6 ಮತ್ತು 9.

ವೃಷಭ: ಗುರುಬಲ ಇದೆ. ಮುಟ್ಟಿದ್ದೆಲ್ಲವೂ ಚಿನ್ನ ಎನ್ನುವಂಥ ಸಮಯವಾಗಲಿದೆ. ವ್ಯಾಪಾರದಲ್ಲಿ ಲಾಭ, ಆರ್ಥಿಕ ಲಾಭ, ಆಸ್ತಿ ಖರೀದಿ ಸಾಧ್ಯತೆಗಳಿವೆ. ಧನವನ್ನು ಶುಭಕಾರ್ಯಕ್ಕೆ ಹೆಚ್ಚು ವ್ಯಯಿಸುವುದು ಒಳ್ಳೆಯದು. ಮಿತ್ರರಿಂದ ದ್ವೇಷ ಉಂಟಾಗಬಹುದು. ಗೆಳೆಯರಿಂದ ದೂರ ಆಗುವ ಸಾಧ್ಯತೆಗಳಿವೆ. ಗಂಡ ಹೆಂಡತಿಯರ ನಡುವೆ ಅಲ್ಪಸ್ವಲ್ಪ ವಿರಸ ಬರಬಹುದು. ರೈತಾಪಿ ವರ್ಗದವರಿಗೆ ಒಳ್ಳೆಯದಾಗಲಿದೆ. ರಾಜಕಾರಣದಲ್ಲಿ ಕೀರ್ತಿ ಪ್ರತಿಷ್ಠೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಶುಭವಾಗಲಿದೆ. ಸಾಧು ಸಂತರ ಸೇವೆ, ಕುಲದೇವತಾ ಆರಾಧನೆ ಮಾಡುವುದು ಒಳಿತು. ಸಿನಿಮಾ ರಂಗ, ಪತ್ರಕರ್ತರಿಗೆ, ಮಾಧ್ಯಮದವರಿಗೆ ಶುಭ. ಬಿಳಿ ಹಾಗೂ ನೀಲಿ ಶುಭ ಬಣ್ಣ. ಶುಕ್ರವಾರ, ಶನಿವಾರ ಶುಭದಿನ. ಶುಭಸಂಖ್ಯೆ 6 ಮತ್ತು 8.

ಮಿಥುನ: ಹೊಸತನವನ್ನು, ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ. ಆದರೆ, ಗುರುಬಲ ಇಲ್ಲ. ರಾಜಕಾರಣದಲ್ಲಿ ಕಂಟಕ ಉಂಟಾಗಬಹುದು. ವೃತ್ತಿಯಲ್ಲಿ ಸ್ವಲ್ಪ ತೊಂದರೆಯಾಗಬಹುದು. ಜ್ಞಾನ, ಗ್ರಹಣ ಶಕ್ತಿ ಹೆಚ್ಚು ಇರುವುದರಿಂದ, ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿದೆ. ವಿರೋಧಿಗಳಿಂದ ತೊಂದರೆ ಆಗಬಹುದು. ಮಾನಸಿಕ ಹಿಂಸೆ ಆಗದಂತೆ ಜಾಗೃತರಾಗಿರಿ. ವಾಹನ ಸಂಚಾರದಲ್ಲಿ ಎಚ್ಚರಿಕೆಯಿಂದ ಇರಿ. ಮಹಿಳೆಯರಿಗೆ ಅದೃಷ್ಟ ಕಾಲ. ಶನಿವಾರ ಮಂಗಳವಾರ ಹನುಮನಿಗೆ ತುಪ್ಪದ ದೀಪ ಹಚ್ಚಿರಿ. ಬುಧವಾರ, ಸೋಮವಾರ ಶುಭವಾರ. ಶುಭಸಂಖ್ಯೆ 5 ಮತ್ತು 3.

ಕರ್ಕ: ಗುರು ದೃಷ್ಟಿ ಇದೆ. ಸಹಾಯ ಗುಣ ಹೆಚ್ಚಿರಲಿದೆ. ವಿವಾಹ, ಸಂತಾನ ಯೋಗವಿದೆ. ಸಾರ್ವಜನಿಕ ಜೀವನದಲ್ಲಿ ಶುಭವಾಗಲಿದೆ. ವಿದೇಶ ಪ್ರಯಾಣ ಸಾಧ್ಯತೆ. ವೃಥಾ ಖರ್ಚು ಮಾಡುವುದು ಬೇಡ. ಮಕ್ಕಳ ಬಗ್ಗೆ ಅತಿಯಾದ ಚಿಂತೆ ಬೇಡ. ಮಕ್ಕಳಿಂದ ಕಿರಿಕಿರಿ ಮಾಡಿಕೊಳ್ಳಬೇಡಿ. ಗಣಪತಿ ನಾಮಸ್ಮರಣೆ ಮಾಡಿ, ಗರಿಕೆ ಅರ್ಪಿಸಿ. ಮುತ್ತು ಧಾರಣೆ ಒಳ್ಳೆಯದು. ಬಿಳಿ, ಕೆಂಪು ಶುಭ ಬಣ್ಣ. ಸೋಮವಾರ ಭಾನುವಾರ ಶುಭವಾರ. ಶುಭಸಂಖ್ಯೆ 2 ಮತ್ತು 7.

ಸಿಂಹ: ಗುರುಬಲ ಇಲ್ಲ. ಅನಿರೀಕ್ಷಿತ ಕಂಟಕ ಬರಬಹುದು. ಎಲ್ಲಾ ವೃತ್ತಿಯಲ್ಲಿ ಅರ್ಧರ್ಧ ಕೆಲಸ ಮಾಡುವ ಸಾಧ್ಯತೆ ಇದೆ. ಮಕ್ಕಳು, ತಂದೆ, ತಾಯಿಗಳಿಗೆ ಅನಾರೋಗ್ಯ ಉಂಟಾಗಬಹುದು. ರೈತಾಪಿ ವರ್ಗದವರಿಗೆ ಶುಭವಾಗಲಿದೆ. ಉಡುಗೊರೆಯಿಂದ ಕಂಟಕ ಸಾಧ್ಯತೆ. ಐಟಿ, ಸರ್ಕಾರಿ ಸಂಸ್ಥೆಯಲ್ಲಿ ಇರುವವರು ಎಚ್ಚರವಾಗಿರಬೇಕು. ದೃಢ ಮನಸ್ಸಿನಿಂದ ಇರಬೇಕು. ಸೂರ್ಯನಾರಾಯಣ ಜಪ. ಗೋಧಿ ಪಾಯಸ ದಾನ. ಅಂಗವಿಕಲರಿಗೆ ಸಹಾಯ ಮಾಡಿ. ಮಾಣಿಕ್ಯ ಧಾರಣೆ. ಓಂ ನಮೋ ಭಾಸ್ಕರಾಯ ನಮ ಜಪ ಮಾಡುವುದರಿಂದ ಒಳ್ಳೆಯದಾಗಲಿದೆ. ಏಪ್ರಿಲ್ 6 ಬಳಿಕ ಮತ್ತಷ್ಟು ಒಳ್ಳೆಯದಾಗಲಿದೆ. ಗುಲಾಬಿ ಬಣ್ಣ ಶುಭ ಬಣ್ಣ. ರವಿವಾರ, ಬುಧವಾರ ಶುಭವಾರ. ಶುಭಸಂಖ್ಯೆ 1 ಮತ್ತು 9.

ಕನ್ಯಾ: ಗುರುಬಲ ಇದೆ. ಮನೆ ಕಟ್ಟಲು ಸಕಾಲವಾಗಿರಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿ ಆಗಲಿದೆ. ಹಾಗೆಂದು, ದುರಾಸೆಯಿಂದ ಪ್ರಯತ್ನ ಬೇಡ. ಸಂತಾನ ಯೋಗವಿದೆ. ಹಳೆಯ ವಸ್ತುಗಳಿದ್ದರೆ ದಾನ ಮಾಡಿ. ಇಟ್ಟುಕೊಳ್ಳಬೇಡಿ. ಅಧಿಕ ಪ್ರಯಾಣ ಸಾಧ್ಯತೆ ಇದೆ. ವಿಷ್ಣು ಜಪ ಮಾಡಿ. ದಕ್ಷಿಣ ದಿಕ್ಕು ಒಳ್ಳೆಯ ದಿಕ್ಕು. ಹಳದಿ, ಹಸಿರು ಶುಭಬಣ್ಣ. ಬುಧವಾರ, ಸೋಮವಾರ ಶುಭವಾರ. ಶುಭಸಂಖ್ಯೆ 5 ಮತ್ತು 7.

ತುಲಾ: ರಾಶಿಗೆ ಮಿಶ್ರಫಲ ಇದೆ. ಪರಿಸ್ಥಿತಿಯನ್ನು ಸುಧಾರಿಸಿಕೊಂಡು ಹೋಗುವ ಗುಣ ಇರಲಿದೆ. ಶೀಘ್ರ ಕೋಪ ಒಳ್ಳೆಯದಲ್ಲ. ಮಹನೀಯರ ಸಹವಾಸ ಮಾಡುವುದು ಒಳ್ಳೆಯದು. ಧನಹಾನಿ ಮಾಡಿಕೊಳ್ಳಬೇಡಿ. ಸಹವಾಸದೋಷದಿಂದ ಸಮಸ್ಯೆ ಉಂಟಾಗಬಹುದು. ವಾಹನದಲ್ಲಿ ಹುಷಾರಾಗಿರಿ. ಅನ್ನಪೂರ್ಣೇಶ್ವರಿ ಆರಾಧನೆ, ಜಪ, ಗೋವಿಗೆ ಅನ್ನದಾನ ಮಾಡುವುದರಿಂದ ಒಳಿತಾಗಲಿದೆ. ಓಂ ದುಂ ದುರ್ಗಾಯೈ ನಮಃ ಮಂತ್ರ ಹೇಳಿ. ಸಂಪ್ಟೆಂಬರ್ 14 ರ ಬಳಿಕ ಒಳ್ಳೆಯದಾಗಲಿದೆ. ಪಶ್ಚಿಮ ದಿಕ್ಕು ಶುಭದಿಕ್ಕು. ಶುಕ್ರವಾರ, ಸೋಮವಾರ ಶುಭವಾರ.

ವೃಶ್ಚಿಕ: ಈ ರಾಶಿಯವರಿಗೆ ಇದು ಕಷ್ಟಕರ ಕಾಲ. ಆರೋಗ್ಯ ಸಮಸ್ಯೆ ಎದುರಾಗಬಹುದು. ಆದರೆ ಛಲವಾದಿ ರಾಶಿ ಇದು. ವ್ಯಾಪಾರ ನಷ್ಟ. ವಾಹನದಿಂದ ಖರ್ಚು. ಕೋರ್ಟ್ ಕೇಸ್ ವ್ಯವಹಾರ ಸಾಧ್ಯತೆ ಇದೆ. ಸಂಗಾತಿಯಿಂದ ಸ್ವಲ್ಪ ಕಷ್ಟ ಎದುರಾಗಬಹುದು. ಹನುಮನ ಆರಾಧನೆ, ಪಂಚಮುಖಿ ಹನುಮ ಭಾವಚಿತ್ರ ಇಟ್ಟುಕೊಳ್ಳುವುದರಿಂದ ಒಳಿತಾಗಲಿದೆ. ಓಂ ಹಂ ಹನುಮತೇ ನಮಃ ಜಪಿಸಿ. ಒಂದಷ್ಟು ಕಾಲ ಮಾತ್ರ ಚೆನ್ನಾಗಿಲ್ಲ. ಉಳಿದಂತೆ ಒಳ್ಳೆಯದಾಗಲಿದೆ. ಮಂಗಳವಾರ ಶುಭವಾರ. ಹವಳ ಧರಿಸುವುದು ಒಳ್ಳೆಯದು. ಕೆಂಪು, ಕಿತ್ತಳೆ ಶುಭಬಣ್ಣ. ಶುಭಸಂಖ್ಯೆ 9 ಮತ್ತು 3.

ಧನು: ದಾನ ಗುಣ ಇದೆ. ಆರ್ಥಿಕ ಉತ್ತುಂಗಕ್ಕೆ ಏರುವ ಸಾಧ್ಯತೆ ಇದೆ. ವಿವಾಹ ಕಾರ್ಯಕ್ಕೆ ಸಕಾಲ. ಪ್ರಯಾಣದ ಸಮಯದಲ್ಲಿ ಜಾಗೃತರಾಗಿರಿ. ಕೋರ್ಟ್ ವ್ಯಾಜ್ಯಗಳಲ್ಲಿ ಶುಭ ಸುದ್ದಿ ಸಿಗಲಿದೆ. ದಕ್ಷಿಣಾಮೂರ್ತಿಯ ಸ್ತೋತ್ರ, ಪೂಜೆಯಿಂದ ಒಳಿತಾಗಲಿದೆ. ಪೂರ್ವ ದಿಕ್ಕು ಒಳ್ಳೆಯದು. ಹಳದಿ ಕೆಂಪು ಶುಭ ಬಣ್ಣ. ಗುರುವಾರ, ಭಾನುವಾರ ಶುಭವಾರ.

ಮಕರ: ತಮ್ಮ ಸ್ಥಾನ ಭದ್ರವಾಗಿರಿಸಿಕೊಳ್ಳುವುದು ಒಳ್ಳೆಯದು. ಒತ್ತಡ ಜಾಸ್ತಿ ಆಗಬಹುದು. ರಕ್ತದೊತ್ತಡ, ಸಕ್ಕರೆ ಖಾಯಿಲೆ ಇರುವವರಿಗೆ ಸ್ವಲ್ಪ ಸಮಸ್ಯೆ ಆಗಬಹುದು. ಆದಾಯ ಇದ್ದರೂ ಉಳಿತಾಯ ಕಷ್ಟವಾಗಬಹುದು. ಬುದ್ಧಿ ಚಂಚಲವಾಗಬಹುದು. ಆದರೂ ತೊಳಲಾಟ ಬೇಡ. ಏಪ್ರಿಲ್ 6 ಬಳಿಕ ಶುಭವಾಗಲಿದೆ. ನೀಲಿ, ಕಪ್ಪು ಶುಭಬಣ್ಣ. ಕಪ್ಪು ಬಟ್ಟೆ, ಕಪ್ಪು ಎಳ್ಳು ದಾನ ಕೊಡುವುದು ಒಳ್ಳೆಯದು. ಕಾಲ ಭೈರವನ ಆರಾಧನೆ ಮಾಡಿ. ಹೋಮ ಮಾಡುವವರಿಗೆ ತುಪ್ಪ ಕೊಡಬಹುದು. ಶುಭಸಂಖ್ಯೆ 8 ಮತ್ತು 6.

ಕುಂಭ: ಸಾಡೇ ಸಾಥಿ ಇದೆ. ಜೂನ್ ಜುಲೈ ಬಳಿಕ ಒಳ್ಳೆಯದಾಗಲಿದೆ. ಆರೋಗ್ಯ ಏರುಪೇರು ಆಗದಂತೆ ಜಾಗೃತೆ ವಹಿಸುವುದು ಒಳಿತು. ದೇವರನಾಮ ಸ್ಮರಣೆಯಿಂದ ಶಾಂತಿ, ನೆಮ್ಮದಿ ಸಿಗಲಿದೆ. ರುದ್ರ ಪೂಜೆ, ರುದ್ರ ಹೋಮದಲ್ಲಿ ಪಾಲ್ಗೊಳ್ಳಬಹುದು. ಶುಭಸಂಖ್ಯೆ 3 ಮತ್ತು 6.

ಮೀನ: ಗುರುಬಲ ಇದೆ. ಇದು ಒಳ್ಳೆಯ ಕಾಲವಾಗಿರಲಿದೆ. ಸಂಕ್ರಾಂತಿ ಫಲ ಚೆನ್ನಾಗಿದೆ. ಸಂಕಲ್ಪ ಚೆನ್ನಾಗಿರಬೇಕು. ಮಹಿಳೆಯರಿಗೆ, ಉದ್ಯಮ, ವ್ಯಾಪಾರಸ್ಥರಿಗೆ, ರೈತಾಪಿ ವರ್ಗದ ಜನರಿಗೆ ಸುಖ, ಸಂತೃಪ್ತಿ ಪ್ರಾಪ್ತಿಯಾಗಲಿದೆ. ಮಾಧ್ಯಮದವರಿಗೆ, ಸಿನಿಮಾ ನಟರಿಗೆ ಒಳ್ಳೆಯದಾಗಲಿದೆ.

(ಡಾ.ಬಸವರಾಜ ಗುರೂಜಿ ಸಂಪರ್ಕ ಸಂಖ್ಯೆ: 99728 48937)

ಸಂಕ್ರಾಂತಿ ಫಲಾಫಲ ದ್ವಾದಶ ರಾಶಿ ಭವಿಷ್ಯ: ಎಸ್.ಕೆ.ಜೈನ್