ಕೊರೊನಾ ವಿಷಾದ ಇದ್ರೂ.. ಸ್ಮಶಾನದಲ್ಲಿ ಮೌಢ್ಯನಿಷೇಧಕ್ಕೆ ‘ಚಾಲನೆ’ ನೀಡಿದ ಜಾರಕಿಹೊಳಿ

ಬೆಳಗಾವಿ: ಕೊರೊನಾ ಬಿಕ್ಕಟ್ಟಿನ ನಡುವೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡಿದ್ದ ಸ್ಮಶಾನದಲ್ಲಿ ಸತೀಶ್ ಜಾರಕಿಹೊಳಿ‌ ಮೌಢ್ಯ ನಿಷೇಧ ಕಾರ್ಯಕ್ರಮ ನೆರವೇರಿಸಿದ್ದಾರೆ.

ಕೊರೊನಾ ವಿಷಾದ ಇದ್ರೂ..
ಬೆಳಗಾವಿಯ ಸದಾಶಿವನಗರ ಸ್ಮಶಾನದಲ್ಲಿ ನೂತನ ಫಾರ್ಚುನರ್ ಕಾರಿಗೆ ಪೂಜೆ , ಪುಷ್ಪಾರ್ಚನೆ ಮಾಡಿ ಬಸವ ನಾಮಸ್ಮರಣೆ ಮಾಡಿದ್ದಾರೆ. ಸಾಮಾಜಿಕ ಅಂತರ ಮರೆತು ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ರು.

ಇನ್ನು ಶ್ರೀ ನಿಜಗುಣಾನಂದ ಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 8 ಸ್ವಾಮೀಜಿಗಳು ಉಪಸ್ಥಿತರಿದ್ರು. ಸ್ಮಶಾನಕ್ಕೆ ಯಾರೂ ಆಗಮಿಸಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮ ವೀಕ್ಷಿಸಬೇಕು ಎಂದು ಸತೀಶ್ ಜಾರಕಿಹೊಳಿ‌ ಮನವಿ ಮಾಡಿದ್ದರು. ಆದರೂ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಬೆಂಬಲಿಗರು ಭಾಗಿಯಾಗಿದ್ದರು.

Related Tags:

Related Posts :

Category:

error: Content is protected !!