ಸ್ಟಾರ್​ಗಳ ಸಿನಿಮಾಗೆ ಲೀಕಾಸುರರ ಕಾಟ.. ಮಾಸ್ಟರ್ ಚಿತ್ರದ ಇಂಟ್ರಡಕ್ಷನ್ ಸೀನ್ ವೈರಲ್

ಒಂದು ಕಡೆ ಲಾಕ್‌ಡೌನ್‌ ಹೊಡೆತಕ್ಕೆ ತತ್ತರಿಸಿರೋ ಸಿನಿಮಾ ಇಂಡಸ್ಟ್ರಿ. ಇನ್ನೊಂದೆಡೆ ಕೇವಲ 50 ಪರ್ಸೆಂಟ್‌ ಪ್ರೇಕ್ಷಕರಿಗೆ ಸಿನಿಮಾ ತೋರಿಸೋ ಚಾಲೆಂಜ್‌.. ಇದೆಲ್ಲದರ ಮದ್ಯೆ ಲೀಕಾಸುರರ ಕಾಟ ಸ್ಟಾರ್‌ ನಟರ ಸಿನಿಮಾಗೆ ತಲೆನೋವಾಗಿದೆ. ಸದ್ಯ ಪ್ರಶಾಂತ್‌ ನೀಲ್‌ ಕಿಲ್‌ ಪೈರಸಿ ಅಂತ ಮಾತು ಸಾಕಷ್ಟು ಸಂಚಲನ ಮೂಡಿಸಿದೆ. ಅದ್ಯಾವ ಸಿನಿಮಾಗೆ ಅದೇನ್‌ ಕಥೆ ಅನ್ನೋದರ ಮಾಹಿತಿ ಇಲ್ಲಿದೆ.

  • TV9 Web Team
  • Published On - 7:24 AM, 13 Jan 2021

ಲಾಕ್‌ಡೌನ್‌ ಹೊಡೆತಕ್ಕೆ ಕೊರೊನಾ ಕಾಟಕ್ಕೆ ಎಲ್ಲಾ ಉದ್ಯಮಗಳು ನೆಲಕಚ್ಚಿ ಹೋಗಿವೆ. ಅದ್ರಲ್ಲೂ ಸಿನಿಮಾ ಇಂಡಸ್ಟ್ರಿಗೆ ತುಸು ಹೆಚ್ಚೇ ಹೊಡೆತ ಬಿದ್ದಿದೆ. ಮಾಸಿದ ಬಣ್ಣದ ಲೋಕಕ್ಕೆ ಈಗ ಕೊಂಚ ಹಂತ ಹಂತವಾಗಿ ನಿಧಾನಕ್ಕೆ ಮೆರುರು ಸಿಗ್ತಿದೆ. ಹೀಗಾಗಿ ಸ್ಟಾರ್‌ಗಳು ಒಂದೊಂದೇ ಸಿನಿಮಾಗಳ ಮಾಹಿತಿ ಹೊರಹಾಕಿ ಮತ್ತೆ ತಮ್ಮ ಅಭಿಮಾನಿಗಳನ್ನ ರಂಜಿಸೋದಕ್ಕೆ ರೆಡಿಯಾಗಿದ್ದಾರೆ.

ಇದೆಲ್ಲಾ ಒಂದು ಕಡೆಯಾದ್ರೆ ಸದ್ಯ ಕಾಲಿವುಡ್‌ ನಟ ವಿಜಯ್‌ ದಳಪತಿ ಅಭಿನಯದ ಮಾಸ್ಟರ್‌ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಫಸ್ಟ್‌ ಸ್ಟಾರ್‌ ಸಿನಿಮಾ ಥಿಯೇಟರ್‌ನಲ್ಲಿ ಅಬ್ಬರಿಸೋಕೆ ರೆಡಿಯಾಗಿದೆ. ಸಂಕ್ರಾಂತಿ ಗಿಫ್ಟ್ ಆಗಿ ಪ್ರೇಕ್ಷಕರನ್ನ ರಂಜಿಸೋದಕ್ಕೆ ಸಜ್ಜಾಗಿದೆ. ಆದ್ರೆ ಸದ್ಯ ಚಿತ್ರದ ಇಂಟ್ರಡಕ್ಷನ್‌ ಸೀನ್‌ ಲೀಕ್‌ ಆಗಿದ್ದು ತಲೆಬಿಸಿಯಾಗಿದೆ. ಹೀಗಾಗಿ ಜನವರಿ 13ಕ್ಕೆ ತೆರೆಗೆ ಅಪ್ಪಳಿಸಬೇಕಿದ್ದ ಸಿನಿಮಾದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

ಸದ್ಯ ಇದೆಲ್ಲಾ ನೋಡಿ ಮಾಸ್ಟರ್‌ ಚಿತ್ರದ ನಿರ್ದೇಶಕ ಲೋಕೇಶ್‌ ಕನಗರಾಜ್‌ ಸೋಶಿಯಲ್‌ ಮೀಡಿಯಾದಲ್ಲಿ ಸಂದೇಶ ರವಾನಿಸಿದ್ದಾರೆ. ಯಾರೂ ಚಿತ್ರದ ತುಣುಕುಗಳನ್ನ ಶೇರ್‌ ಮಾಡಬೇಡಿ ಅಂತ ಕಿಡಿಗೇಡಿಗಳ ಕೃತ್ಯಕ್ಕೆ ಕಿಡಿಕಾರಿದ್ದಾರೆ. ಮಾಸ್ಟರ್‌ ನಿರ್ದೇಶಕ ಲೋಕೇಶ್‌, ಟ್ವೀಟ್‌ಗೆ ರಿಯಾಕ್ಟ್‌ ಮಾಡಿರೋ ಕೆಜಿಎಫ್‌ 2 ಸಿನಿಮಾ ನಿರ್ದೇಶಕ ಪ್ರಶಾಂತ್‌ ನೀಲ್‌, ಕಿಲ್‌ ಪೈರಸಿ ಅಂತ ಪೈರಸಿ ವಿರುದ್ಧ ಗುಡುಗಿದ್ದಾರೆ. ಈಗಾಗ್ಲೇ ಕೆಜಿಎಫ್‌ 2 ಸಿನಿಮಾದ ಟೀಸರ್‌ ಕೂಡ ಲೀಕ್ ಆಗಿ ಬೇಸರದಲ್ಲಿರೋ ನೀಲ್‌ ಈ ರೀತಿ ಹೇಳಿದ್ದಾರೆ.

ಒಟ್ನಲ್ಲಿ ಸದ್ಯ ಹಾಗೋ ಹೀಗೋ ಚೇತರಿಸಿಕೊಂಡು ಮತ್ತೆ ಪ್ರೇಕ್ಷಕರನ್ನ ರಂಜಿಸೋಕೆ ರೆಡಿಯಾಗ್ತಿದ್ದ ಸ್ಟಾರ್‌ ಸಿನಿಮಾಗಳಿಗೆ ಲೀಕಾಸುರರು ಆರಂಭದಲ್ಲೇ ಕಂಟಕವಾಗ್ತಿದ್ದಾರೆ. ಹೀಗಾಗಿ ಮುಂದೆ ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾಗಳಿವೆ. ಅವರೆಲ್ಲರ ಸಿನಿಮಾಗಳಿಗೆ ಯಾವ ರೀತಿ ಮುಂಜಾಗ್ರತೆ ಕ್ರಮ ಕೈಗೊಳ್ಳುತ್ತವೆ. ಪರಿಹಾರ ಕಂಡುಕೊಳ್ಳುತ್ತವೆ ಚಿತ್ರತಂಡಗಳು ಅನ್ನೋದನ್ನ ಕಾದು ನೋಡ್ಬೇಕಿದೆ.

ಕೆಜಿಎಫ್​ ಕಥೆ ಹೇಳಿದ ಮಾಳವಿಕಾ ಅವಿನಾಶ್.. ಪಾರ್ಟ್​ 2 ಸೆಟ್​ ಅದೆಷ್ಟು ಅದ್ಧೂರಿ!