ಡಿಜೆ ಹಳ್ಳಿ, ಶೃಂಗೇರಿ ಘಟನೆ ಹಿಂದೆ ಬಿಜೆಪಿ ಕೈವಾಡ: SDPI ನಿಂದ ಬಿಜೆಪಿ-RSS ಮೇಲೆ ಆರೋಪ

ಬೆಂಗಳೂರು: ಶೃಂಗೇರಿಯಲ್ಲಿ ನಡೆದ ಘಟನೆ ಆರೋಪಿ ಮಿಲಿಂದ್‌ಗೂ ಮತ್ತು ಅಲ್ಲಿನ ಬಿಜೆಪಿ ನಾಯಕ ಜೀವರಾಜ್‌ಗೂ ನಿಕಟ ಸಂಬಂಧವಿದೆ. ಮಿಲಿಂದ್‌ನನ್ನು ಅರೆಸ್ಟ್‌ ಮಾಡಿದ್ದಕ್ಕೆ ಜೀವರಾಜ್‌ ಪೊಲೀಸರಿಗೆ ನಡುರಸ್ತೆಯಲ್ಲಿಯೇ ಧಮಕಿಹಾಕಿದ್ದಾರೆ. ಅವರನ್ನು ತಕ್ಷಣವೇ ಬಂಧಿಸಬೇಕು ಎಂದು SDPI ನ ರಾಜ್ಯಾಧ್ಯಕ್ಷ ಇಲಿಯಾಜ್ ಮಹಮ್ಮದ್ ತುಂಬೆ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ತುಂಬೆ, ಶೃಂಗೇರಿಯ ಘಟನೆ ಹಾಗೂ SDPI ಬಗ್ಗೆ ಮಾದ್ಯಮಗಳು ಪುಂಖಾನು ಪುಂಖವಾಗಿ ವರದಿ ಮಾಡುತ್ತಿವೆ. ಸರ್ಕಾರವು ಸಹ ಇದರ ಬಗ್ಗೆ ಹೇಳಿದೆ. ಆದ್ರೆ ಸತ್ಯ ಏನು ಅಂತಾ ಇವತ್ತು ಗೊತ್ತಾಗಿದೆ. ಇದನ್ನು ಚುನಾವಣೆ ವಿಚಾರ ಮಾಡುವ ಹುನ್ನಾರ ಮಾಡಿ ಗಲಭೆ ಸೃಷ್ಟಿಸಲು ಬಿಜೆಪಿ ಈ ರೀತಿ ಮಾಡುತ್ತಿದೆ ಎಂದು SDPI ಅಧ್ಯಕ್ಷ ತುಂಬೆ ಆರೋಪಿಸಿದ್ದಾರೆ.

ಇದೇ ರೀತಿ ಐದಾರು ಘಟನೆ ನಡೆದಿವೆ. ಮುಸಲ್ಮಾನರ ಬಗ್ಗೆ ಅವಿಶ್ವಾಸ ಕಟ್ಟೋಕೆ ಬಿಜೆಪಿ ಪ್ಲಾನ್ ಮಾಡಿದೆ. ಬಿಜೆಪಿ ಪಕ್ಷ ಆರಂಭವಾದಾಗಿನಿಂದ ಇದೇ ರೀತಿ ಮಾಡಲಾಗ್ತಿದೆ. ಅಡ್ವಾನಿಯಿಂದ ಎಲ್ಲರೂ ಇದೇ ರೀತಿ ಮಾಡಿದ್ದಾರೆ. ಇದೆಲ್ಲ ನಿಲ್ಲಿಸಬೇಕಾಗಿದೆ ಎಂದು SDPIಮುಖಂಡರು ಹೇಳಿದ್ದಾರೆ.

ಭಜರಂಗದಳದ ಶರಣ್ ಜೊತೆ ಮಾತಾಡಿ ನಮ್ಮ ರಾಜ್ಯದ ಗೃಹ ಮಂತ್ರಿಯೇ ನಿಮ್ಮ ಮೇಲಿರೋ ಕೆಸ್ ತೆಗೆದು ಹಾಕುತ್ತೆವೆ ಅಂತಾರೆ. ಈ ಸಂಬಂಧ ಬಸವರಾಜ್ ಬೊಮ್ಮಾಯಿ ಮೇಲೆ ಕಾನೂನು ಕ್ರಮ ಮುಂದಾಗುತ್ತೇವೆ ಎಂದ ಎಸ್‌ಡಿಪಿಐ ಮುಖಂಡರು, ಯಡಿಯೂರಪ್ಪನವರನ್ನ ಇಳಿಸಲು ಬಿಜೆಪಿಯೊಳಗೆ ಈಶ್ವರಪ್ಪ ಮುಂದಾಳತ್ವದಲ್ಲಿ ಗುಂಪುಗಾರಿಕೆ ನಡೆತಿದೆ ಎಂದು ಆರೋಪಿಸಿದ್ದಾರೆ.

ಡಿಜೆ ಹಳ್ಳಿ ಘಟನೆಯಲ್ಲಿ ಯಾರೆಲ್ಲ ಭಾಗಿಯಾಗಿದ್ರು ಅವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ನವಿನ್ ಹಿಂದೆ ಯಾರಿದ್ದಾರೆ? ಯಾಕೆ ಆತ ಈ ರೀತಿಯ ಪೋಸ್ಟ್‌ ಹಾಕಿದ? ಈ ಹಿಂದೆ ಕೂಡಾ ಆತ ತುಂಬಾ ಕಮೆಂಟ್ ಗಳನ್ನ ಈ ರೀತಿ ಹಾಕಿದ್ದ. ಲಾಕ್ ಡೌನ್ ಸಂದರ್ಭದಲ್ಲಿ ಇದೇ ರೀತಿ ತುಂಬಾ ಕಮೆಂಟ್ ಹಾಕಿದ್ದಾರೆ. ನವೀನ್ ಕಾಂಗ್ರೆಸ್ ಶಾಸಕರ ಸಂಭಂದಿಯಾಗಿದ್ರು ಸಹ, ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರ ಜೊತೆ ನಿಕಟ ಸಂಭಂಧಿ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ನಾವು ಕಂಡುಕೊಂಡಂತಹ ಸತ್ಯೆ ಎನಂದ್ರೆ ನವೀನ್ ಹಿಂದೆ ಬಿಜೆಪಿ ಇದೆ. ಮುಸ್ಲಿಂ ಮತ್ತು ದಲಿತ್ ಓಟ್ ಬ್ಯಾಂಕ್ ಒಡೆಯಲು ಬಿಜೆಪಿಯೇ ಗಲಭೆ ಸೃಷ್ಟಿ ಮಾಡಿದೆ. ಇನ್ನೊಂದು ಕಾಂಗ್ರೆಸ್ ನಾಯಕರ ನಡುವಿನ ರಾಜಕೀಯ ಕಾರಣಕ್ಕೂ ಗಲಭೆ ಆಗಿರಬಹುದು. ಬಸವರಾಜ್ ಬೊಮ್ಮಾಯಿ ಮತ್ತು ಅಶೋಕ್ ಈಗಾಗಲೆ ಯಾರು ತಪ್ಪಿತಸ್ತರು ಅಂತ ಹೇಳಿದ್ದಾರೆ. ತನಿಖೆಯಾಗೋ ಮುಂಚೆಯೆ ಈ ರೀತಿ ಹೇಳಿದ್ದಾರೆ. ಆದ್ರೆ ಹಾಲಿ ಹೈಕೊರ್ಟ್ ನ್ಯಾಯಧಿಶರಿಂದ ಘಟನೆಯ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಆರ್ ಎಸ್ ಎಸ್ ಮತ್ತು ಬಿಜೆಪಿ 30 ಕ್ಕೂ ಹೆಚ್ಚು ಮತ್ತು ಕೆರಳದಲ್ಲಿ 400 ಕೊಲೆ ಮಾಡಿವೆ. ಹಾಗಿದ್ರೆ ಯಾರಿಗೆ ಮೊದಲು ಬ್ಯಾನ್ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಕೆ ಜಿ ಹಳ್ಳಿಯಲ್ಲಿನ ಪ್ರಕರಣದಲ್ಲಿ ಪೋಲಿಸ್ ಪಕ್ಕದಲ್ಲಿ ಇದ್ದೊರಿಗೆ ಮೊದಲ ಆರೋಪಿ ಮಾಡಿದ್ದಾರೆ. ಸಂವಿಧಾನವನ್ನ ಬದಲಾಯಿಸೋರಿಂದ ಈ ಕೃತ್ಯ ನಡೆದಿದೆ. ಆರ್ ಎಸ್ ಎಸ್ ಮತ್ತು ಬಿಜೆಪಿ ಮಾಡಿರೋ ಎಲ್ಲಾ ಕೊಲೆಗಳಗಳ ದಾಖಲೆ ಇದೆ. ಅದನ್ನೆಲ್ಲ ಇಟ್ಟುಕೊಂಡು ಕಾನೂನು ಹೋರಾಟ ಮಾಡುತ್ತೇವೆ ಎಂದು ತುಂಬೆ ಹೇಳಿದ್ದಾರೆ.

ಪರೇಶ್ ಕೊಲೆ ಪ್ರಕರಣ ಸಂದರ್ಭದಲ್ಲಿ ಶಿರಸಿಯಲ್ಲಿ ಐಜಿಪಿ ಮುಂದೆ ಕಾರ್ ಸುಟ್ಟುಹಾಕಿದ್ರು. ಆ ಕೇಸ ವಾಪಾಸ್ ಪಡೆಯಲಾಗಿದೆ. ಜೀವರಾಜ್ ಮೇಲೆ ಯಾವರೀತಿ ಕಾನೂನು ಹೋರಾಟ ಮಾಡಬೇಕು ಅಂತ ನಮ್ಮ ಲೀಗಲ್ ಸೆಲ್ ಜೊತೆ ಚರ್ಚೆ ಮಾಡಿ ತಿರ್ಮಾನ ಮಾಡುತ್ತೆವೆ ಎಂದು ಮುಂದಿನ ಹೋರಾಟದ ಬಗ್ಗೆ ಎಸ್‌ಡಿಪಿಐ ಮುಖಂಡರು ತಿಳಿಸಿದ್ದಾರೆ.

Related Tags:

Related Posts :

Category: