ರಾಮ ಮಂದಿರಕ್ಕೆ 11 ಬೆಳ್ಳಿ ಇಟ್ಟಿಗೆ ಕಳಿಸ್ತಿದ್ದಾರಂತೆ ಕಾಂಗ್ರೆಸ್ಸಿನ ಕಮಲನಾಥ್!

ಭೋಪಾಲ್: ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ ಇಂದು ನಡೆಯಲಿರುವ ಭೂಮಿ ಪೂಜೆ ಸಮಾರಂಭಕ್ಕೆ ಒಂದು ದಿನ ಮೊದಲೇ ನಿನ್ನೆ ಮಂಗಳವಾರ ಮಧ್ಯಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರು ತಮ್ಮ ನಿವಾಸದಲ್ಲಿ ಹನುಮಾನ್ ಚಾಲಿಸ್ ಪಠಣ ಮಾಡಿಸಿದ್ದಾರೆ.

ಜೊತೆಗೆ ಪಕ್ಷದ ಸದಸ್ಯರಿಂದ ದೇಣಿಗೆ ಸಂಗ್ರಹಿಸಿ ಅದರಿಂದ 11 ಬೆಳ್ಳಿ ಇಟ್ಟಿಗೆಗಳನ್ನು ಖರೀದಿಸಿ ಅಯೋಧ್ಯೆಗೆ ಕಳುಹಿಸಲಾಗುತ್ತಿದೆ ಎಂದು ಮಾಜಿ ಸಂಸದ ಸಿಎಂ ಮತ್ತು ಕಾಂಗ್ರೆಸ್ ಮುಖಂಡ ಕಮಲ್ ನಾಥ್ ತಿಳಿಸಿದ್ದಾರೆ.

ಆಗಸ್ಟ್ 5 ರಂದು ನಿಗದಿಯಾಗಿದ್ದ ರಾಮ ದೇವಾಲಯದ ಭೂಮಿ ಪೂಜೆ ಸಮಾರಂಭವನ್ನು ಉಲ್ಲೇಖಿಸಿ, ಇದು ಇಡೀ ದೇಶ ಕಾಯುತ್ತಿದ್ದ ಐತಿಹಾಸಿಕ ದಿನ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Related Tags:

Related Posts :

Category: