ಹಿರಿಯ ಕಲಾವಿದೆ ಶಾಂತಮ್ಮ ನಿಧನ

ಮೈಸೂರು: ಹಿರಿಯ ಕಲಾವಿದೆ ಶಾಂತಮ್ಮ ಇಂದು ನಿಧನರಾಗಿದ್ದಾರೆ. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ 93 ವರ್ಷದ ಹಿರಿಯ ನಟಿ ಇಂದು ಸಂಜೆ 5.30 ಕ್ಕೆ ಕೊನೆಯುಸಿರೆಳೆದಿದ್ದಾರೆ.

ಶಾಂತಮ್ಮ 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ತಾಯಿ, ಅಜ್ಜಿ ಹಾಗೂ ಇತರೆ ಪೋಷಕ ಪಾತ್ರಗಳಲ್ಲಿ ನಟಿಸಿದ್ದರುಎಲ್ಲರ ಗಮನ ಸೆಳೆದಿದ್ದರು.

ನಿನ್ನೆ ಶಾಂತಮ್ಮರಿಗೆ ತೀವ್ರ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಌಂಬ್ಯೂಲೆನ್ಸ್​ನಲ್ಲಿ ಆಸ್ಪತ್ರೆಗೆ ಸೇರಿಸಲು ಅವರ ಕುಟುಂಬಸ್ಥರು  ಹರಸಾಹಸ ಪಡಬೇಕಾಯಿತು ಎಂದು ತಿಳಿದುಬಂದಿದೆ. ಬೆಡ್ ಸಿಗದೆ ರಾತ್ರಿ 1 ಗಂಟೆವರೆಗೂ ಕಾಯಬೇಕಾಯಿತು ಎಂದು ನಟಿಯ ಪುತ್ರಿ  ಟಿವಿ 9 ಗೆ ಮಾಹಿತಿ ನೀಡಿದ್ದಾರೆ.

 

 

 

 

Related Tags:

Related Posts :

Category:

error: Content is protected !!