ಕೊರೊನಾಗೆ ಕಿರುತೆರೆಯ ಹಿರಿಯ ಕಲಾವಿದ ಕೊನೆಯುಸಿರು

ಬೆಂಗಳೂರು: ಕೊರೊನಾ ಸೋಂಕಿನಿಂದ ಕಿರುತೆರೆಯ ಹಿರಿಯ ಕಲಾವಿದ ಹುಲಿವಾನ್ ಗಂಗಾಧರ್ ಸಾವನ್ನಪ್ಪಿದ್ದಾರೆ.
ತೀವ್ರ ಜ್ವರ, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 70 ವರ್ಷ ನಟ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೂವರು ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ ನಟ ಕನ್ನಡದ ಶಿವಾಜಿನಗರ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ನಾಟಕ, ಸಿನಿಮಾ, ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ಗಂಗಾಧರ್ ಪೋಷಕ ಪಾತ್ರಗಳಿಂದ ಹೆಚ್ಚು‌ ಪರಿಚಿತರು. ಪ್ರೇಮಲೋಕ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು.

ಧಾರವಾಹಿ ಚಿತ್ರೀಕರಣದಲ್ಲಿ ಭಾಗಿಯಾಗಿ ಎರಡನೇ ದಿನಕ್ಕೆ ಜ್ವರ ಕಾಣಿಸಿಕೊಂಡ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಕೊವಿಡ್ ಪಾಸಿಟಿವ್ ಎಂದು ತಿಳಿದ ನಂತ್ರ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ, ಮಕ್ಕಳ ಜೊತೆ ಮಾತನಾಡುವುದನ್ನ ಸಹ ಬಿಟ್ಟಿದ್ರಂತೆ. ಅಂತಿಮವಾಗಿ, ನಿನ್ನೆ ರಾತ್ರಿ ಬಿಜಿಎಸ್ ಆಸ್ಪತ್ರೆಯಲ್ಲಿ ಸೋಂಕಿಗೆ ಅಸುನೀಗಿದ್ದಾರೆ.

Related Tags:

Related Posts :

Category:

error: Content is protected !!