ವರುಣಾರ್ಭಟಕ್ಕೆ ಕೊಚ್ಚಿಹೋದ ಉತ್ತರ ಕರ್ನಾಟಕ.. ಕೃಷ್ಣೆ, ಭೀಮೆಯ ಮುನಿಸಿಗೆ ಬದುಕೇ ನಾಶ

ರಾಯಚೂರು: ಭೀಮಾ, ಕೃಷ್ಣಾ ನದಿಗಳು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ರಾಯಚೂರು ತಾಲೂಕಿನ 17 ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಕೃಷ್ಣಾ ನದಿಯ ನೀರು ನುಗ್ಗುವ ಭೀತಿ ಹಿನ್ನೆಲೆಯಲ್ಲಿ ಗುರ್ಜಾಪುರ ಗ್ರಾಮಸ್ಥರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಗ್ರಾಮಸ್ಥರು ತೆರಳಲು ಬಸ್‌ ವ್ಯವಸ್ಥೆ ಮಾಡಲಾಗಿದೆ. ಆದ್ರೆ ಗ್ರಾಮ ಬಿಟ್ಟು ತೆರಳುವುದಕ್ಕೆ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಶಾಶ್ವತ ಪರಿಹಾರ ಕಲ್ಪಿಸುವವರೆಗೆ ಹೋಗಲ್ಲವೆಂದು ಪಟ್ಟು ಹಿಡಿದಿದ್ದಾರೆ.

ಅಪಾಯದ ಮಟ್ಟ ಮೀರಿ ಹರಿತಿರುವ ಕೃಷ್ಣ ನದಿಗೆ ಭೀಮಾನದಿ ನೀರು ಸೇರ್ಪಡೆಗೊಂಡಿದೆ. ಹೀಗಾಗಿ 17 ಗ್ರಾಮಗಳಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ಕಳೆದ ಬಾರಿ ಸಹ ಇದೇ ರೀತಿ ಮಳೆ, ಪ್ರವಾಹವಾದಾಗ ಅಧಿಕಾರಿಗಳು ಜನರನ್ನು ಸ್ಥಳಾಂತರಿಸಿ ಅವರಿಗೆ ಪರಿಹಾರ ನೀಡದೆ ಸುಮ್ಮನಾಗಿದ್ದರು. ಹೀಗಾಗಿ ಈ ಬಾರಿ ಶಾಶ್ವತ ಪರಿಹಾರ ಕಲ್ಪಿಸುವವರೆಗೆ ಹೋಗಲ್ಲವೆಂದು ಪಟ್ಟು ಹಿಡಿದಿದ್ದಾರೆ.

ಇನ್ನು ಕೃಷ್ಣ ನದಿ ದಂಡೆ ಗ್ರಾಮಗಳ ರೈತರ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಗುರ್ಜಾಪುರ, ಅರಶಿಣಗಿ ಸೇರಿ 10ಕ್ಕೂ ಹೆಚ್ಚು ಗ್ರಾಮಗಳ 300 ಎಕರೆಗೂ ಹೆಚ್ಚು ಪ್ರದೇಶದಲ್ಲಿದ್ದ ಭತ್ತ ನೀರುಪಾಲಾಗಿದೆ. ಪದೇ ಪದೇ ಕೃಷ್ಣ ನದಿ ಪ್ರವಾಹದಿಂದ ಅನ್ನದಾತರ ಬದುಕು ಬರ್ಬಾದ್ ಆಗಿದೆ.

Related Tags:

Related Posts :

Category:

error: Content is protected !!