ಕಾರ್ಕಳದ ಕೊಲೆಗೆ ರಿವೆಂಜಾ? ಡ್ರಗ್ಸ್​ ವಿಚಾರವಾಗಿ ಹತ್ಯೆಯಾ? -ಮನೀಷ್​ ಕೊಲೆಗೆ ಕಾರಣವೇನು?

ಬೆಂಗಳೂರು: ಬಾರ್​ ಮಾಲೀಕ ಮನೀಷ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಪರಾರಿಯಾದ ಸಿಸಿಟಿವಿ ದೃಶ್ಯಾವಳಿ ದೊರೆತಿದೆ. ಇದಲ್ಲದೆ, ಕೃತ್ಯಕ್ಕೆ ಬಳಸಲಾಗಿದ್ದ ಬೈಕ್‌ಗೆ ನಕಲಿ ನಂಬರ್ ಪ್ಲೇಟ್ ಸಹ ಅಳವಡಿಸಿರುವ ಅಂಶ ಬೆಳಕಿಗೆ ಬಂದಿದೆ. ಹಂತಕರು ಬೈಕ್‌ಗೆ KA 04 EA 1543 ನಂಬರ್ ಪ್ಲೇಟ್​ನ ಬಳಸಿದ್ದರು ಎಂದು ತಿಳಿದುಬಂದಿದೆ. ಪೊಲೀಸರಿಗೆ ಸಿಕ್ಕಿಬೀಳದಂತೆ ಫೇಕ್ ನಂಬರ್ ಪ್ಲೇಟ್​ ಬಳಸಲಾಗಿದೆಯಂತೆ.
ಇದು ಡ್ರಗ್ ವಿಚಾರವಾಗಿ ನಡೆದ ಕೊಲೆಯಾ?
ಮನೀಷ್ ಶೆಟ್ಟಿ ಕೊಲೆಗೆ ಕಾರಣವೇನು ಎಂಬ ಪ್ರಶ್ನೆಗೆ ಹಲವು ಆಯಾಮಗಳು ಸಿಗುತ್ತಿವೆ. ಹತ್ಯೆಯಾದ ಬಾರ್​ ಮಾಲೀಕ ಡ್ರಗ್ ಪೆಡ್ಲರ್ ಸಂತೋಷ್ ಶೆಟ್ಟಿ ಜೊತೆ ಸಂಪರ್ಕ ಹೊಂದಿದ್ದ ಎಂದು ಹೇಳಲಾಗಿದ್ದು ಸಂತೋಷ್ ಶೆಟ್ಟಿ ಸಹಚರನಾಗಿ ಕೆಲಸ ಮಾಡಿದ್ದನಂತೆ.

ಮನೀಷ್​ ಸಹ ಡ್ರಗ್ ಜಾಲದಲ್ಲಿ ಪಾಲು ಹೊಂದಿದ್ದ ಎಂದೂ ಸಹ ಹೇಳಲಾಗಿದೆ. ಹಾಗಾಗಿ, ಇದೇ ಡ್ರಗ್ಸ್​ ವಿಚಾರವಾಗಿ ಮನೀಷ್​ ಶೆಟ್ಟಿಯನ್ನು ಕೊಲೆ ಮಾಡಲಾಯ್ತಾ ಎಂಬ ಪ್ರಶ್ನೆ ಮೂಡಿದೆ.

ಭೂಗತ ಲೋಕದ ಪಾತಕಿಯಿಂದ ಮನೀಷ್​ ಹತ್ಯೆ?
ಇನ್ನು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದ್ದ ಕಿಶನ್ ಹೆಗ್ಡೆ ಕೊಲೆಗೆ ಸೇಡು ತೀರಿಸಿಕೊಳ್ಳಲು ಮನೀಷ್​ ಹತ್ಯೆ ನಡೆಯಿತಾ ಅನ್ನೋ ಮಾತು ಸಹ ಕೇಳಿಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮಂಗಳೂರಿನ ಕೊಡಿಕೆರೆ ಮನೋಜ್ ಗ್ಯಾಂಗ್ ಕಿಶನ್​ ಹೆಗ್ಡೆಯನ್ನು ಈ ಹಿಂದೆ ಕೊಲೆಗೈದಿತ್ತು.

ಮನೋಜ್​ಗೆ ಇದೇ ಮನೀಷ್ ಶೆಟ್ಟಿ ಸಹಕಾರ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಹಾಗಾಗಿ, ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಗ್ಯಾಂಗ್​ನಿಂದ ಮನೀಶ್ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ, ಕಿಶನ್ ಹೆಗ್ಡೆ ಅಣ್ಣ ಬಳ್ಳಾರಿ ಜೈಲಿನಲ್ಲಿ ಇದ್ದಾನೆ. ಅವನ ಅಣತಿಯಂತೆ ಮತ್ತು ವಿಕ್ಕಿ ಶೆಟ್ಟಿ ಅಣತಿಯಂತೆ‌ ಮನೀಶ್ ಶೆಟ್ಟಿಯನ್ನು ಕೊಲೆಮಾಡಲಾಗಿದೆ ಅನ್ನೋ ಮಾತು ಕೇಳಿಬಂದಿದೆ.

Related Tags:

Related Posts :

Category:

error: Content is protected !!