ಕುಂದಾನಗರಿ: ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎದುರಾಯ್ತು ಆಪತ್ತು

ಬೆಳಗಾವಿ: ಭಾರಿ ಮಳೆಯ ಅಬ್ಬರಕ್ಕೆ ನಗರದ ಜನರು ತತ್ತರಿಸಿ ಹೋಗಿದ್ದಾರೆ. ಧಾರಾಕಾರ ಮಳೆಯಿಂದ ಯಳ್ಳೂರ ರಸ್ತೆ, ಆನಂದ ನಗರ, ವಡಗಾಂವ್​ನಲ್ಲಿ ಮಳೆ ನೀರು ನಿಲ್ಲುತ್ತಿದೆ. ಹೀಗಾಗಿ, ಏರಿಯಾದ ಅರ್ಧದಷ್ಟು ಮನೆಗಳು ಮುಳುಗಡೆಯಾಗುತ್ತಿದೆ.

ರಾತ್ರಿಯಿಡೀ ಸುರಿದ ಮಳೆಯಿಂದ ಮನೆಗಳಿಗೆ ನೀರು ನುಗುತ್ತಿದ್ದು ಮೂರು ಕಾಲೋನಿಗಳು ಭಾಗಶಃ ಆವೃತವಾಗಿವೆ.

ರಸ್ತೆಯಲ್ಲಿ ತುಂಬಿರೋ ನೀರಲ್ಲಿ ಮಹಿಳೆಯರು, ವೃದ್ಧರು ಓಡಾಡುವ ಸ್ಥಿತಿ ಎದುರಾಗಿದೆ. ವಿಪರ್ಯಾಸವೆಂದರೆ, ಕಳೆದ ವರ್ಷವೂ ಈ ಕಾಲೋನಿಗಳಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿತ್ತು. ಆದರೆ, ಬೆಳಗಾವಿ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆಯನ್ನ ಬಗೆಹರಿಸದೆ ಈ ಬಾರಿಯೂ ಆಪತ್ತು ಎದುರಾಗಿದೆ.

ಕಳೆದ ಬಾರಿಯ ಮಳೆಗೆ ನೀರು ನುಗ್ಗಿದ್ದರೂ ಅಧಿಕಾರಿಗಳು ಈ ಸಲ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಂಡಿಲ್ಲ. ಹಾಗಾಗಿ, ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

Related Tags:

Related Posts :

Category: