ಸಿಟಿ ಇನ್​ಸ್ಟಿಟ್ಯೂಟ್​ ಮುಂದೆ.. ಜಿಂಕೆ ಕೊಂಬು ಮಾರಲು ಯತ್ನಿಸುತ್ತಿದ್ದ ಕಿರಾತಕ ಅಂದರ್​

ಜಿಂಕೆ ಕೊಂಬುಗಳನ್ನ ಮಾರಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಶಂಕರಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಮೂಲದ ರಾಜಶೇಖರ ನಾಯಕ್ (28) ಬಂಧಿತ ಆರೋಪಿ.

  • TV9 Web Team
  • Published On - 20:22 PM, 12 Jan 2021
ಜಿಂಕೆ ಕೊಂಬು ಮಾರಲು ಯತ್ನಿಸುತ್ತಿದ್ದ ಕಿರಾತಕ ಅಂದರ್

ಬೆಂಗಳೂರು: ಜಿಂಕೆ ಕೊಂಬುಗಳನ್ನ ಮಾರಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಶಂಕರಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಮೂಲದ ರಾಜಶೇಖರ ನಾಯಕ್ (28) ಬಂಧಿತ ಆರೋಪಿ.

ನಿನ್ನೆ ಸಿಟಿ ಇನ್​ಸ್ಟಿಟ್ಯೂಟ್ ಮುಂಭಾಗದಲ್ಲಿ ಜಿಂಕೆ ಕೊಂಬು ಮಾರಲು ಯತ್ನಿಸುತ್ತಿದ್ದ ರಾಜಶೇಖರನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಬಂಧಿತನಿಂದ 24 ವಿವಿಧ ಅಳತೆಯ ಜಿಂಕೆ ಕೊಂಬುಗಳನ್ನು ಜಪ್ತಿ ಮಾಡಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಆರೋಪಿಗಳಿಂದ ಲಂಚ ಪಡೆಯುವಾಗ ACB ದಾಳಿ: ತಪ್ಪಿಸಿಕೊಳ್ಳಲು ಹೋಗಿ ಕಾಲು ಮುರಿದುಕೊಂಡ ಕಾನ್ಸ್​ಟೇಬಲ್!