ಆದಿತ್ಯನ ರೆಸಾರ್ಟ್​ನಿಂದ ‘ನಶೆಯಲ್ಲಿ ತೇಲಿ’ ಬಂದ ನಟಿ ಮಾಡಿಕೊಂಡ ‘ಆಕ್ಸಿಡೆಂಟ್’ ಅದು!

ಬೆಂಗಳೂರು: ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ Blue-eyed boy, ವರ್ಚಸ್ವೀ  ರಾಜಕಾರಣಿ ಜೀವರಾಜ್ ಆಳ್ವ ಖರೀದಿಸಿದ್ದ ನಾಲ್ಕು ಎಕರೆ ಭೂಮಿ ಇಂದು ಡ್ರಗ್ಸ್​ ಲೋಕವಾಗಿ ಮಾರ್ಪಟ್ಟಿದೆ. ಸ್ವತಃ ಅವರ ಪುತ್ರ ಆದಿತ್ಯನೇ ಇದೀಗ ಆ ಡ್ರಗ್ಸ್ ಲೋಕದ ನಾಲ್ಕು ಎಕರೆ ಜಾಗದ ಮಾಲೀಕ.

ನಾಲ್ಕಾರು ತಿಂಗಳ ಹಿಂದೆ ಕೊರೊನಾ ಸೋಂಕಿನಿಂದ ಇಡೀ ಜಗತ್ತೇ ಬಾಗಿಲು ಹಾಕಿಕೊಂಡು ಮಲಗಿ ಬಿಟ್ಟಿತ್ತು. ಆದ್ರೆ ಆ ಮಾದಕ ಲೋಕವೊಂದು ಮಾತ್ರ ನಿಶೆಯೇರಿಸಿಕೊಂಡು ರಂಗೀಲಾ ಲೋಕದಲ್ಲಿ ವಿಹರಿಸುತ್ತಿತ್ತು. ಅದರಲ್ಲೂ ಆದಿತ್ಯನ ರೆಸಾರ್ಟ್​ ಅಂತೂ ನಶಾಲೋಕಕ್ಕೆ ಪ್ರಶಸ್ತ ಸ್ಥಳವಾಗಿತ್ತು. ಆ ನಶೆಯಿಂದ ತೇಲಿ ಬಂದ ನಟಿಯೊಬ್ಬಳು ‘ಆಕ್ಸಿಡೆಂಟ್’ ಮಾಡಿಕೊಂಡಿದ್ದಳು. ಆದ್ರೆ ಅದನ್ನು ಮುಚ್ಚಿಹಾಕಲಾಗಿತ್ತು.

ಇದೀಗ ಆ ‘ಆಕ್ಸಿಡೆಂಟ್’ಗೆ ಆಘಾತಕಾರಿ ತಿರುವು ಸಿಕ್ಕಿದೆ. ಅಂದು ಸೆಲ್ಫ್​ ‘ಆಕ್ಸಿಡೆಂಟ್’ ಮಾಡಿಕೊಂಡ ಆ ನಟಿಯೇ ಶರ್ಮಿಳಾ ಮಾಂಡ್ರೆ! ಅಂದು ಶರ್ಮಿಳಾ ಮಾಂಡ್ರೆಯೆಂಬ ಬೆಡಗಿ, ಆದಿತ್ಯನ ಹೌಸ್​ ಆಫ್​ ಲೈಫ್​ನಲ್ಲಿ ಮಾದಕ ಲೋಕದ ಪಾರ್ಟಿ ಮುಗಿಸಿಕೊಂಡು ವಾಪಸಾಗುವಾಗ ವಸಂತನಗರದ ಬಳಿ ಕಾರು ಆಕ್ಸಿಡೆಂಟ್​ ಮಾಡಿಕೊಂಡಿದ್ದಳು.

House Of Life ಅಡ್ಡೆಯಿಂದ ಆದಿತ್ಯ ಆಳ್ವನ ಫ್ಲಾಟ್​ನಲ್ಲಿ ತಂಗಲು ಆ ನಡುರಾತ್ರಿ ಬರುತ್ತಿದ್ದಾಗ ನಟಿ ಶರ್ಮಿಳಾ ಮಾಂಡ್ರೆ ಐಷಾರಾಮಿ ಕಾರು ಅಪಘಾತಕ್ಕೀಡಾಗಿತ್ತು ಎಂದು ಮೂಲಗಳಿಂದ ಇದೀಗ ಬಯಲಾಗಿದೆ.

Related Tags:

Related Posts :

Category: