11 ವರ್ಷದಲ್ಲಿ ಶಶಿತರೂರ್​ಗೆ ಮೊದಲ ಬಾರಿಗೆ ಪವರ್​ ಕಟ್​ Shock!

ದೆಹಲಿ: ದೇಶದ ನರನಾಡಿಯ ಮೇಲೆ ಹಿಡಿತ ಸಾಧಿಸುವ ಶಕ್ತಿ ಕೇಂದ್ರ ಅಂದರೆ ಅದು ದೆಹಲಿ. ಅದರಲ್ಲೂ ಲುಟಿಯೆನ್ಸ್​ ದೆಹಲಿ (Lutyens Delhi) ಇನ್ನೂ ಹೆಚ್ಚು ಪ್ರತಿಷ್ಠಿತ ಮತ್ತು ಪ್ರಭಾವೀ ಬಡಾವಣೆ. ಪ್ರಧಾನಿ ಮೋದಿಯ ಕಚೇರಿಯಿಂದ ಹಿಡಿದು ವಿವಿಧ ರಾಜಕೀಯ ನಾಯಕರ ಬಂಗಲೆಗಳು ಇದೇ ಭಾಗದಲ್ಲಿ ಇರುವುದು. ಅಂದ ಮೇಲೆ, ಈ ಜಾಗ ಮಹಾಭಾರತದ ಪಾಂಡವರ ರಾಜಧಾನಿ ಇಂದ್ರಪ್ರಸ್ಥದಂತೆ ವೈಭವೋಪೇತವಾಗಿರಲೇ ಬೇಕು. ದಿನದ 24 ಗಂಟೆ ವಾಟರ್​ ಮತ್ತು ಕರೆಂಟ್​ ಸಪ್ಲೈ ಹೀಗೆ ಹತ್ತು ಹಲವಾರು ಸೌಕರ್ಯಗಳು ಇದ್ದೇ ಇರುತ್ತೆ ಅಂತಾ ನೀವು ಅಂದುಕೊಂಡಿದ್ರೇ ಅದು ಸುಳ್ಳು.

ಹಾಗಂತ ನಾವು ಹೇಳುತ್ತಿಲ್ಲ. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್​ ನಾಯಕ ಹಾಗೂ ಇದೇ ಲುಟಿಯೆನ್ಸ್​ ದೆಹಲಿಯ ನಿವಾಸಿ ಶಶಿ ತರೂರ್ ಸ್ವತಃ ಹಂಚಿಕೊಂಡಿದ್ದಾರೆ. ತಮ್ಮ ಏರಿಯಾದಲ್ಲಿ ನಿನ್ನೆ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಸಲ ಕರೆಂಟ್​ ಹೋದ ಬಗ್ಗೆ Tweet ಮಾಡಿದ್ದರು.

11 ವರ್ಷದಲ್ಲಿ ಮೊದಲ ಬಾರಿಗೆ
ನಾನು ಈ ಹಿಂದೆ ಇಂಧನ ಸಚಿವರನ್ನ ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ.. ನಾನು ಲುಟಿಯೆನ್ಸ್​ ದೆಹಲಿಯಲ್ಲಿ 11 ವರ್ಷಗಳಿಂದ ವಾಸವಾಗಿದ್ದೇನೆ. ಆದರೆ, ಈವರೆಗೂ ಬಡಾವಣೆಯಲ್ಲಿ ಒಂದು ಬಾರಿಯೂ ಕರೆಂಟ್​ ಕಟ್​ ಆಗೇ ಇಲ್ಲ ಎಂದು ಹೇಳಿದ್ದೆ. ನನ್ನ ಮಾತು ಕೇಳಿ ಬೀಗಿದ ಸಚಿವರು ಅದು ಹಾಗೆಯೇ ಮುಂದುವರೆಯುವುದು, ಏನೂ ತೊಂದರೆಯಾಗುವುದಿಲ್ಲ ಬಿಡಿ ಎಂದು ಆಶ್ವಾಸನೆ ನೀಡಿದ್ದರು.

ಆದರೆ, ಇಂದು ಬೆಳಗ್ಗೆಯಿಂದ ಐದು ಸಲ ಕರೆಂಟ್​ ಹೋಗಿದೆ. ಕಂಪ್ಲೇಂಟ್​ ಮಾಡೋಣಾ ಅಂದ್ರೆ ವಿದ್ಯುತ್​ ಇಲಾಖೆಯ ಸಹಾಯವಾಣಿ ಸಹ ಸ್ವಿಚ್​ ಆಫ್​ ಆಗಿದೆ ಎಂದು ತಮ್ಮ ಟ್ವೀಟ್​ನಲ್ಲಿ ಶಶಿ ತರೂರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಶಿ ಮಾತಿಗೆ ಪೂರಕವೆಂಬಂತೆ ದೊರಕಿರುವ ಮಾಹಿತಿ ಪ್ರಕಾರ 2011 ರಿಂದ ಈವರೆಗೂ ಲುಟಿಯೆನ್ಸ್​ ದೆಹಲಿಯಲ್ಲಿ ಒಮ್ಮೆಯೂ ಕರೆಂಟ್ ಹೋಗೇ ಇಲ್ಲವಂತೆ! ಹೀಗಾಗಿ, ದೇಶದ ಶಕ್ತಿ ಕೇಂದ್ರವಾಗಿರುವ ಲುಟಿಯೆನ್ಸ್​ ದೆಹಲಿಯಲ್ಲಿ ಈ ಸಲ ಕರೆಂಟ್ ಹೋಗಿರೋದು ನಮ್ಮ ರಾಜಕೀಯ ನಾಯಕರಿಗೆ ಕಸಿವಿಸಿ ಉಂಟುಮಾಡಿದೆ. ಒಟ್ನಲ್ಲಿ, ಈಗಲಾದ್ರೂ ಕರೆಂಟ್​ ಹೋದಾಗ ಜನಸಾಮಾನ್ಯರು ಅನುಭವಿಸುವ ಯಾತನೆ ಹೇಗಿರುತ್ತೆ ಅನ್ನೋ feeling ನಮ್ಮ ನಾಯಕರಿಗೆ ಆಗಿದೆ.

Related Tags:

Related Posts :

Category:

error: Content is protected !!