ಹೇಮಾವತಿ ನದಿಯಲ್ಲಿ ಮುಳುಗಿದ ಶಿವನ ದೇವಾಲಯ!

ಹಾಸನ ಜಿಲ್ಲೆಯಲ್ಲಿ ಮೂರು ದಿನಗಳಿಂದ ವರುಣನ ಆರ್ಭಟ ಮುಂದುವರಿದಿದೆ. ಭಾರಿ ಮಳೆಯಿಂದಾಗಿ ಹೇಮಾವತಿ ನದಿ ಉಕ್ಕಿ ಹರಿಯುತ್ತಿದೆ. ಚಿಕ್ಕಮಗಳೂರು ಭಾಗದಲ್ಲಿ ಭಾರೀ ಮಳೆಯಾಗುತ್ತಿರೋ ಹಿನ್ನೆಲೆ ನದಿಯಲ್ಲಿ ಹೆಚ್ಚಿದ ನೀರಿನ ಹರಿವು ಹೆಚ್ಚಾಗಿದೆ. ಹೇಮಾವತಿ ನದಿ ತೀರದ ಪ್ರದೇಶ ಜಲಾವೃತವಾಗುವ ಆತಂಕ ಎದುರಾಗಿದೆ.

ಉಕ್ಕಿ ಹರಿಯುತ್ತಿರೋ ಹೇಮಾವತಿ ನದಿಯಲ್ಲಿ ಶಿವ ದೇವಾಲಯ ಮುಳುಗಿದೆ. ಸಕಲೇಶಪುರದ ಹೊಳೆ ಮಲ್ಲೇಶ್ವರ ದೇವಾಲಯ ಸದ್ಯಕ್ಕೆ ಜಲಾವೃತವಾಗಿದೆ.

Related Tags:

Related Posts :

Category: