ಸ್ಸಾರೀ ಬೊಮ್ಮಾಯಿಯವರೇ, ಪದ ಪ್ರಯೋಗ ಬಾಯಿತಪ್ಪಿ ಆಗಿದೆ: ಶಿವಕುಮಾರ

ಮಂಗಳವಾರದಂದು ಬೆಂಗಳೂರಿನ ಕೆ ಜಿ ಹಳ್ಳಿ ಮತ್ತು ಡಿಜೆ ಹಳ್ಳಿಗಳಲ್ಲಿ ನಡೆದ ಗಲಭೆ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಅವರ ವಿರುದ್ಧ ಏಕವಚನ ಬಳಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ ವಿಷಾದ ವ್ಯಕ್ತಪಡಿಸಿದ್ದಾರೆ.

ಶನಿವಾರದಂದು ಪತ್ರಿಕಾ ಪ್ರಕಟಣೆಯೊಂದನ್ನು ನೀಡಿ, ‘ಬಸವರಾಜ ಬೊಮ್ಮಾಯಿ ಅವರ ಬಗ್ಗೆ, ಅವರು ಅಲಂಕರಿಸಿರುವ ಸ್ಥಾನದ ಬಗ್ಗೆ ನನಗೆ ಗೌರವವಿದೆ. ಉದ್ದೇಶಪೂರ್ವಕವಾಗಿ ನಾನು ಏಕವಚನ ಪದ ಬಳಸಿಲ್ಲ. ಮಾತಿನ ಭರದಲ್ಲಿ ಅದು ಬಳಕೆಯಾಗಿದೆ. ಆಗಿರುವ ಪ್ರಮಾದಕ್ಕಾಗಿ ವಿಷಾದಿಸುತ್ತೇನೆ,’ ಎಂದು ಶಿವಕುಮಾರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಮ್ಮಿಂದಾಗುವ ತಪ್ಪುಗಳಿಗೆ ರಾಜಕಾರಣಿಗಳು ವಿಷಾದ ವ್ಯಕ್ತಪಡಿಸುವುದು, ಕ್ಷಮೆ ಕೇಳುವುದು ತೀರ ಅಪರೂಪವಾಗಿರುವ ದಿನಗಳಲ್ಲಿ ಶಿವಕುಮಾರ ಇದಕ್ಕೆ ವಿರುದ್ಧವಾದ ಪ್ರವೃತ್ತಿಯನ್ನು ತೋರಿರುವುದು ಗಮನಾರ್ಹ ಮತ್ತು ರಾಜಕೀಯ ಪ್ರಭುದ್ಧತೆಯ ದ್ಯೋತಕ.

Related Tags:

Related Posts :

Category: