ಶಿವಮೊಗ್ಗ PSI ಮೇಲೆ ಹಲ್ಲೆ ಪ್ರಕರಣ: ಓರ್ವ ಆರೋಪಿಯನ್ನ ಬಂಧಿಸಿದ ಖಾಕಿ

ಶಿವಮೊಗ್ಗ: ಜಿಲ್ಲೆಯ ಕುಂಸಿ ಠಾಣೆಯ PSI ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸರು ಆರೋಪಿ ಮಧುನನ್ನ ಬಂಧಿಸಿದ್ದಾರೆ.

ಮೊನ್ನೆ ಬೆಳಗ್ಗೆ ಗಾಂಜಾ ದಂಧೆಕೋರರ ಬಂಧನಕ್ಕೆ ತೆರಳಿದ್ದಾಗ ಕುಂಸಿ ಠಾಣೆಯ PSI ನವೀನ್ ಮಠಪತಿ ಮೇಲೆ ಆರೋಪಿ ಹಲ್ಲೆಮಾಡಿ ಪರಾರಿಯಾಗಿದ್ದನು ಎಂದು ತಿಳಿದುಬಂದಿದೆ. ಆರೋಪಿ ಮಧು ಹಾಗೂ ಆತನ ಸಹೋದರ ಹಲ್ಲೆಯಲ್ಲಿ ಶಾಮೀಲಾಗಿದ್ದರು.

ಇದೀಗ, ಪರಾರಿಯಾಗಿರುವ ಮತ್ತೊಬ್ಬ ಆರೋಪಿ ಮನುಗಾಗಿ ಹುಡುಕಾಟ ನಡೆಯುತ್ತಿದೆ. ಗ್ರಾಮಾಂತರ ಪೋಲೀಸ್ ಠಾಣೆಯ CPI ಸಂಜೀವ್ ಕುಮಾರ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಲಾಯಿತು.

Related Tags:

Related Posts :

Category: